ಮಂಗಳೂರು, ಜು 31(DaijiworldNews/HR): ದುಷ್ಕರ್ಮಿಗಳಿಂದ ಗತ್ಯೆಯಾಗೊರಿವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಪ್ರವೀಣ್ ಸಾವು ದುಃಖ ತಂದಿದೆ. ಹಲವರ ಸಮಸ್ಯೆ, ಕಷ್ಟಗಳಿಗೆ ಪ್ರವೀಣ್ ಸ್ಪಂದಿಸುತ್ತಿದ್ದ. ಆದರೆ ಈಗ ಆತ ಇಲ್ಲ ಎನ್ನುವುದು ಕಷ್ಟ. ಪ್ರಕರಣದ ತನಿಖೆ ಎನ್ ಐ ಎ ಗೆ ಒಪ್ಪಿಸಲಾಗಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ಕಠಿಣ ಶಿಕ್ಷೆ ಕೊಡುವ ಭರವಸೆಯಿದೆ ಎಂದರು.
ಇನ್ನು ಈ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶೋಭಾ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಎರಡು ದಿನಗಳ ಹಿಂದೆ ಪತ್ರ ಬರೆದಿದ್ದರು.
ಪ್ರವೀಣ್ ಮನೆಗೆ ಭೇಟಿ ನೀಡಿದ ವೇಳೆ ಐದು ಲಕ್ಷ ರೂಪಾಯಿಗಳ ಚೆಕ್ ಅನ್ನು ಪ್ರವೀಣ್ ಕುಟುಂಬಸ್ಥರಿಗೆ ನೀಡಿದ್ದಾರೆ.