ಕಠ್ಮಂಡು,ಜ 28 (MSP): 2018ರ ಮಾರ್ಚ್ 12ರಂದು ಕಠ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಯುಎಸ್–ಬಾಂಗ್ಲಾ ಏರ್ಲೈನ್ಸ್ ಪತನಗೊಂಡು 51 ಮಂದಿ ಅಸುನೀಗಿರುವ ದುರ್ಘಟನೆಗೆ ಪೈಲೆಟ್ ನಿರ್ಬಂಧಗಳನ್ನು ಮೀರಿ ಕಾಕ್ಪಿಟ್ನಲ್ಲಿಯೇ ಧೂಮಪಾನ ಮಾಡಿರುವುದೇ ದುರಂತಕ್ಕೆ ಕಾರಣ ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಬಾಂಗ್ಲಾದೇಶದ ಢಾಕಾದಿಂದ ಕಠ್ಮಂಡುಗೆ ಬಂದಿಳಿಯಬೇಕಾಗಿದ್ದ ಯುಎಸ್–ಬಾಂಗ್ಲಾ ಏರ್ಲೈನ್ಸ್ ವಿಮಾನ ಮಾರ್ಚ್ 12 ಮಧ್ಯಾಹ್ನ 2.20ಕ್ಕೆ ಭೂ ಸ್ಪರ್ಶ ಮಾಡಿತ್ತು. ಆದರೆ ಭೂ ಸ್ಪರ್ಶ ಮಾಡುವ ಸಂದರ್ಭ ವಿಮಾನವು ರನ್ವೇಯಿಂದ ಜಾರ್ರಿ ಹೋಗಿ ಮುಂದಕ್ಕೆ ಚಲಿಸಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದು ಪಕ್ಕದಲ್ಲೇ ಇರುವ ಫುಟ್ಬಾಲ್ ಮೈದಾನದಲ್ಲಿ ವಿಮಾನ ಪತನವಾಗಿತ್ತು. ವಿಮಾನವನ್ನು ರನ್ವೇಯಲ್ಲಿ ಇಳಿಯಲು ಅನುಸರಿಸಿದ ಎತ್ತರ ಹಾಗೂ ಪಾಲನೆಯಾಗದ ನಿಯಮಗಳ ನಡುವೆಯೂ ವಿಮಾನ ರನ್ವೇಗೆ ಸ್ವರ್ಶ ಮಾಡಿದರೂ ಅವಘಡ ಸಂಭವಿಸಿತ್ತು.
ಇನ್ನು ಈ ವಿಮಾನಯಾನ ಸಂಸ್ಥೆಯ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಮಾನಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ ಎನ್ನುವಂತಹ ಕಠಿಣ ನಿಯಮ ಹೊಂದಿದೆ. ಈ ದುರಂತದ ಬಗ್ಗೆ ತನಿಖೆ ನಡೆಸುತ್ತಿದ್ದ ಆಯೋಗವು, ಪೈಲಟ್ ಇನ್ ಕಮಾಂಡ್ ಕಾಕ್ ಪಿಟ್ ನಲ್ಲಿ ಧೂಮಪಾನ ಮಾಡಿರುವುದನ್ನು ದೃಢಪಡಿಸಿದೆ. ಕಾಕ್ಪಿಟ್ ನಲ್ಲಿ ಧ್ವನಿ ಸಂಗ್ರಹದ ಪರಿಶೀಲನೆ ನಡೆಸಿರುವ ತನಿಖಾ ತಂಡವು ವಿಮಾನಯಾನದ ಸಂದರ್ಭದಲ್ಲಿ ಕಾಕ್ಪಿಟ್ನಲ್ಲಿ ಪೈಲಟ್ ಧೂಮಪಾನ ಮಾಡಿರುವುದಾಗಿ ಸಾಬೀತಾಗಿದೆ ಇದೇ ದುರಂತಕ್ಕೆ ಬಲವಾದ ಕಾರಣ ಎಂದು ತಿಳಿಸಿದೆ. ವಿಮಾನಯಾನದ ಸಂದರ್ಭದಲ್ಲಿ ತಂಬಾಕು ಪದಾರ್ಥ ಸೇವನೆ ಮಾಡಿದ್ದು ಇದನ್ನು ಹೊರತುಪಡಿಸಿ ಇನ್ಯಾವುದೇ ನಿಷೇಧಿತ ವಸ್ತುಗಳ ಸೇವನೆ ಮಾಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಮುಂದಾಗುವ ಅವಘಡವನ್ನು ಅರಿತುಕೊಳ್ಳುವಲ್ಲಿ ಸಿಬ್ಬಂದಿ ವಿಫಲತೆ ಹಾಗೂ ಸಿಬ್ಬಂದಿಯ ದಿಕ್ಕು ತೋಚದ ಸ್ಥಿತಿ ಪ್ರಯಾಣಿಕರ ಸಾವಿಗೆ ಕಾರಣ ಎಂದು ತನಿಖಾ ಆಯೋಗ ಅಭಿಪ್ರಾಯಪಟ್ಟು ಈ ವರದಿಯನ್ನು ನೇಪಾಳದ ಪ್ರವಾಸೋದ್ಯಮ, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಆಯೋಗ ತನಿಖಾ ವರದಿ ಸಲ್ಲಿಸಿದೆ.