ಬಂಟ್ವಾಳ, ಜು 30(DaijiworldNews/HR): ಕಳೆದ ಕೆಲವು ದಿನಗಳ ಕಾಲ ವಿರಾಮ ಪಡೆದು ಕೊಂಡಿದ್ದ ಮಳೆ ಶನಿವಾರ ಮುಂಜಾನೆ ಧಾರಾಕಾರವಾಗಿ ಸುರಿದು ತುಂಬೆಯಲ್ಲಿ ಮನೆಯೊಂದಕ್ಕೆ ಹಾನಿ ಮಾಡಿದೆ.
ತುಂಬೆಯ ಮುದಲ್ಮೆ ನಾಗಪ್ಪ ಪೂಜಾರಿ ಅವರ ಮನೆಯ ಹಿಂಬದಿಯ ಗೋಡೆ ಕುಸಿದು ಮನೆಗೆ ತೀವ್ರ ಹಾನಿಯಾಗಿದೆ. ಮುಂಜಾನೆ ಮನೆಯವರೆಲ್ಲಾ ಮಲಗಿರುವ ವೇಳೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಮನೆ ಮಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕಳ್ಳಿಗೆ ಗ್ರಾಮದ ಮುಂಡಾಜೆ ಅಶ್ವಿನ್ ಎಂಬವರ ಮನೆಗೆ ನೀರು ನುಗ್ಗಿದ್ದು, ಅಪಾರ ಹಾನಿ ಸಂಭವಿಸಿದೆ.
ಬಂಟ್ವಾಳ ಮೂಡ ಗ್ರಾಮದ ಮೊಡಂಕಾಪಿನ ಕಾಮೆರೆಕೋಡಿನಲ್ಲಿ ಸಾರ್ವಜನಿಕ ನೀರು ಹೊಗುವ ತೋಡಿಗೆ ಮುನ್ಸಿಪಾಲಿಟಿಯ ವತಿಯಿಂದ ನಿರ್ಮಿಸಲಾದ ಕಾಲು ಸಂಕವು ರಾತ್ರಿ ಬಂದ ಮಳೆಗೆ ಕುಸಿದು ಬಿದ್ದಿದೆ.
ಇನ್ನು ಸಂಕದ ಬದಿ ಇರುವ ಮುನ್ಸಿಪಾಲಿಟಿಯ ಮಾಜಿ ಅದ್ಯಕ್ಷರಾದ ಶ್ರಿಮತಿ ಜೋಸ್ಫಿನ್ ಡಿ'ಸೊಜರವರ ಮನೆಯ ಆವರಣ ಗೋಡೆ ಕುಸಿದು ಹತ್ತಿರವಿರುವ ಪಂಪ್ಶೆಡ್ ಮತ್ತು ನೀರಿನ ಟಾಂಕ್ ಕುಸಿಯುವ ಆಪಾಯವಿದೆ ಎಂದು ತಿಳಿದು ಬಂದಿದೆ.