ಮಂಗಳೂರು, ಜು 30(DaijiworldNews/HR): ನಗರ ಪಾಲಿಕೆ ವ್ಯಾಪ್ತಿಯ ಉಳ್ಳಾಲ, ಮುಲ್ಕಿ, ಮೂಡಬಿದಿರೆ ಮತ್ತು ಬಂಟ್ವಾಳ ತಾಲೂಕಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಪ್ರದೇಶದ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಂದು ಮಂಗಳೂರು ಉಪ ವಿಭಾಗದಾದ್ಯಂತ (ಮಂಗಳೂರು ನಗರ ಪಾಲಿಕೆ, ಮುಲ್ಕಿ, ಮೂಡಬಿದಿರೆ, ಉಳ್ಳಾಲ ಮತ್ತು ಬಂಟ್ವಾಳ ತಾಲೂಕು) ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ಪುತ್ತೂರು ಉಪವಿಭಾಗದ ಇತರ ಸ್ಥಳಗಳಲ್ಲಿ, ಸ್ಥಳೀಯ ಪರಿಸ್ಥಿತಿಯನ್ನು ನಿರ್ಣಯಿಸಿ ತಹಶೀಲ್ದಾರರು ಮತ್ತು ಬಿಇಒಗಳು ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ.