ನವದೆಹಲಿ, ಜ27(SS): ಜನವರಿ ತಿಂಗಳಲ್ಲಿ ನಾವು ಒಂದು ಕೆಟ್ಟ ಸುದ್ದಿ ಕೇಳಿದೆವು, ಅದು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ 111 ವರ್ಷ ಸಿದ್ದಗಂಗಾ ಶ್ರಿಗಳು ನಿಧನರಾದ ವಿಷಯ ಎಂದು ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಶ್ರೀಗಳನ್ನು ಸ್ಮರಿಸಿಕೊಂಡಿದ್ದಾರೆ.
ಮನ್ ಕೀ ಬಾತ್ ನಲ್ಲಿ ಮಾತನಾಡಿದ ನರೇಂದ್ರ ಮೋದಿ, ಬಸವಣ್ಣನವರು ಕಾಯಕವೇ ಕೈಲಾಸ ಎಂದು ನಂಬಿದ್ದರು. ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಬಸವಣ್ಣನನರ ಮಾರ್ಗದಲ್ಲಿ ಸಾಗಿದವರು. ಜನವರಿ ತಿಂಗಳಲ್ಲಿ ನಾವು ಒಂದು ಕೆಟ್ಟ ಸುದ್ದಿ ಕೇಳಿದೆವು, ಅದು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ 111 ವರ್ಷ ಸಿದ್ದಗಂಗಾ ಶ್ರಿಗಳು ನಿಧನರಾಗಿದ್ದು. ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ, ಸಾವಿರಾರು ಮಂದಿಗೆ ಶಿಕ್ಷಣ, ಊಟ ವಸತಿ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಹೇಳಿಕೊಂಡಿದ್ದಾರೆ.
'ನಡೆದಾಡುವ ದೇವರು' ಎಂದೇ ಕರೆಸಿಕೊಳ್ಳುವ ತುಮಕೂರು ಸಿದ್ಧಗಂಗಾ ಮಠದ 111 ವರ್ಷದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವಯೋಸಹಜ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಶ್ರೀಗಳು ಸೋಮವಾರ (ಜ.22) ಬೆಳಗ್ಗೆ 11.45ಕ್ಕೆ ಲಿಂಗೈಕ್ಯರಾಗಿದ್ದರು. ಈ ಹಿನ್ನಲೆ, ಪ್ರಧಾನಿ ಮೋದಿ ಶ್ರೀಗಳನ್ನು ಸ್ಮರಿಸಿಕೊಂಡಿದ್ದಾರೆ.