ಉಪ್ಪಿನಂಗಡಿ, ಜು 29 (DaijiworldNews/SM) ನಾಯಿಯೊಂದು ಹಲವು ಮಂದಿ ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ಹುಚ್ಚು ನಾಯಿಯೆಂಬ ಭೀತಿ ಆರಂಭಗೊಂಡಿದೆ.
ಶುಕ್ರವಾರ ಈ ಪರಿಸರದ ಹಲವು ನಾಯಿಗಳಿಗೆ ಈ ನಾಯಿ ಕಚ್ಚಿದ್ದು, ವೃದ್ಧೆಯೋರ್ವರು ಸೇರಿದಂತೆ ಕೆಲವರಿಗೆ ಕಚ್ಚಿದೆ ಎನ್ನಲಾಗಿದೆ. ಇಲ್ಲಿನ ಜನತಾ ಕಾಲನಿಯಲ್ಲಿರುವ ಮನೆ ಮಂದಿ ಸಾಕಿದ ನಾಯಿ ಎಂದು ಹೇಳಲಾಗಿದೆ.
ಈ ಹಿಂದೆ ರಿಕ್ಷಾ ಅಪಘಾತದಲ್ಲಿ ನಾಯಿಯ ತಲೆಗೆ ಏಟಾಗಿದ್ದು, ಆದುದರಿಂದ ಅದು ಈ ರೀತಿ ವರ್ತಿಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಸದ್ಯ ಮನುಷ್ಯರ ಮೇಲೆ ದಾಳಿ ನಡೆಸಿರುವ ಕಾರಣದಿಂದಾ ಈ ಪರಿಸರದಲ್ಲಿ ಆತಂಕ ಮನೆ ಮಾಡಿದೆ.