ಮಂಗಳೂರು, ಜು 29 (DaijiworldNews/SM):ಸುರತ್ಕಲ್ ನಲ್ಲಿ ನಡೆದಂತಹ ಘಟನೆಯ ಹಿನ್ನಲೆಯಲ್ಲಿ ನಾಳೆ ಬೆಳಗ್ಗೆಯವರೆಗೆ 144 ಸೆಕ್ಷನ್ ಜಾರಿಯಲ್ಲಿತ್ತು.144 ಸೆಕ್ಷನ್ ಜಾರಿಯನ್ನು ಆ. 1ರ ಬೆಳಗ್ಗೆ 6ವರೆಗೆ ವಿಸ್ತರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಈ ಸಮಯದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮದ್ಯ ಮಾರಾಟವನ್ನೂ ಕೂಡಾ ನಿಷೇಧಿಸಲಾಗಿದೆ.ಸಂಜೆ ಸಮಯದಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿಸಂಜೆ 6 ಗಂಟೆಯಿಂದ ಬೆ. 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.ಅನಾವಶ್ಯಕವಾಗಿ ಯಾರೂ ಕೂಡಾ ಹೊರ ಬರಬಾರದು.
ಸಾರ್ವಜನಿಕರ ಹಿತದೃಷ್ಟಿಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.ಸಾರ್ವಜನಿಕರು ಪೊಲೀಸ್ ಇಲಾಖೆ, ಜಿಲ್ಲಾಡಳಿತದ ಜೊತೆ ಸಹಕರಿಸಿ ಎಂದುಮಂಗಳೂರು ನಗರ ಕಮಿಷನರ್ ಎನ್. ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.