ಕುಂದಾಪುರ, ಜು 29 (DaijiworldNews/MS): ಭಯೋತ್ಪಾದನೆ, ಮತೀಯವಾದವನ್ನು ನಿಯಂತ್ರಿಸಲು ಸರ್ಕಾರ ತಂಡವಾಗಿ ಕೆಲಸ ಮಾಡುತ್ತಿದ್ದು, ಇಂತಹ ಕೃತ್ಯ ನಡೆದಾಗ ಜಾತಿ ಧರ್ಮ ಮುಖ್ಯ ಅಲ್ಲ ಅಪರಾಧಿಯನ್ನು ಶಿಕ್ಷಿಸುವುದೇ ನಮ್ಮ ಗುರಿಯಾಗಿದೆ. ಯಾವ ಧರ್ಮದಲ್ಲೂ ಹಿಂಸೆ ನಡೆದರೂ ಸರ್ಕಾರ ಸಹಿಸುವುದಿಲ್ಲ. ಯಾರೇ ದುಷ್ಕೃತ್ಯದಲ್ಲಿ ಭಾಗಿಯಾದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಈ ಬಾರಿ ಷಡ್ಯಂತ್ರವನ್ನು ಭೇದಿಸಲು ಸಿಎಂ, ಗೃಹಮಂತ್ರಿ ಮತ್ತು ಸರಕಾರ ಎಲ್ಲರು ಒಟ್ಟಾಗಿ ಕೆಲಸ ಮಾಡುತ್ತಿದೆ. ಇಂತಹ ಪರಿಸ್ಥಿತಿಯನ್ನು ನಿಯಂತ್ರಣ ತರುವುದನ್ನು ಬಿಟ್ಟರೇ ಬೇರೆ ಮಾರ್ಗ ಇಲ್ಲ. ಇಂತಹ ಮಾನಸಿಕತೆ ಇರುವವರು ತಲೆ ಎತ್ತಬಾರದು ಎಂಬುದೇ ಗುರಿ, ಇದಕ್ಕಾಗಿ ಪೊಲೀ ಸ್ ವ್ಯವಸ್ಥೆಯನ್ನು ಹೆಚ್ಚಿಸುತ್ತೇವೆ. ನಡೆದ ಪ್ರಕರಣದ ಬಗ್ಗೆ ನಿದಾರ್ಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಇಂತಹ ಪ್ರಕರಣ ನಡೆದಾಗ ಕಾನೂನಿನ ಕೈಯಿಂದ ತಪ್ಪಿಸಿಕೊಂಡು ರಾಜಾರೋಪಚಾರ ಪಡೆಯಲು ಅಸಾಧ್ಯ.
ನಾನು ಏನು ಹೇಳಬೇಕು ಎಂಬ ರೀತಿಯಲ್ಲಿ ನನ್ನನ್ನು ಕಾಡಬೇಡಿ, ಕೆಲಸ ಮಾಡಬೇಡಿ ತೋರಿಸುತ್ತೇನೆ. ಈ ವ್ಯವಸ್ಥೆಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದು ಬಿಟ್ಟು ಬೇರೆ ಮಾರ್ಗವಿಲ್ಲ. ಆ ಶಬ್ದದ ಹಿನ್ನಲೆ ಏನು ಅಂದರೆ ಯಾವ ಆರೋಪಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಾಕ್ಷ್ಯಧಾರಗಳು ನಾಶವಾಗದಂತೆ ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಶಿಕ್ಷೆ ಕೊಡುವ ಕೆಲಸ ಮಾಡುತ್ತೇವೆ.
ಈ ಘಟನೆಗಳಿಂದ ಎಲ್ಲರಿಗೂ ನೋವಾಗಿದೆ, ನಮ್ಮ ಪಕ್ಷದ ತಳ ಮಟ್ಟದ ಕಾರ್ಯಕರ್ತರು ಕೋಪದಿಂದ ರೋಷದಿಂದ ಮಾತನಾಡಿದ್ದಾರೆ. ಕಾರ್ಯಕರ್ತರಿಗೆ ವಸ್ತುನಿಷ್ಟ ವಿಚಾರವನ್ನು ಮನವರಿಕೆ ಮಾಡುವ ಕೆಲಸ ಮಾಡಿದ್ದೇವೆ. ನನಗೆ ವಿಶ್ವಾಸದೆ ಎಲ್ಲರನ್ನು ಒಟ್ಟಾಗಿ ಒಂದಾಗಿ ಕರೆದುಕೊಂಡು ಹೋಗುತ್ತೇವೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರವನ್ನು ವಹಿಸುತ್ತೇವೆ
"ದುರದೃಷ್ಟಕ್ಕೆ ಮತೀಯವಾದದ ಕಂಪೆನಿಗಳು ಕಾನೂನಿಗೆ ಸೆಡ್ಡು ಹೊಡೆದಾದರೂ ಹಿಂಸೆಯನ್ನು ಬಲಗೊಳಿಸಲು ಪ್ರಯತ್ನ ಮಾಡುತ್ತಿದೆ. ರಾಷ್ಟ್ರೀಯತೆ , ಭಾರತೀಯತೆ ಎಂದು ಹೇಳುವವರನ್ನು ನಿಯಂತ್ರಣಕ್ಕೆ ತರಬೇಕು. ಹಿಂದುತ್ವ ಎಂದವರನ್ನು ಬಗ್ಗು ಬಡಿಬೇಕು ಎನ್ನುವ ಭಾವನೆ ಜಾಸ್ತಿಯಾಗುತ್ತಿದೆ. ಇದರ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಅದನ್ನು ಮಾಡುತ್ತೇವೆ".
"ಪರಮೇಸ್ತ ನ ತಂದೆ ತಾಯಿ ಇಂದಿಗೂ ನನ್ನ ಸಂಪರ್ಕದಲ್ಲಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ. ಜಿಲ್ಲಾ ಉಸ್ತುವಾರಿ ಮಂತ್ರಿ ನಾನಾಗಿದ್ದು, ಎಲ್ಲದಕ್ಕೂ ಕಾಲಾವಕಾಶ ಬೇಕು. ಕಾರ್ಯಕರ್ತರು ಮನಸಿಗೆ ಉಂಟಾದ ನೋವಿನಿಂದ ಸಾಮೂಹಿಕ ರಾಜಿನಾಮೆಗೆ ಇಳಿದಿದ್ದಾರೆ. ನಮ್ಮದೇ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಿದ್ದಾರೆ, ನಮಗಾಗಿ ಕೆಲಸ ಮಾಡಿದ್ದಾರೆ. ಅವರು ಹೇಳಿರುವ ಮಾತುಗಳ ಬಗ್ಗೆ ಕ್ರಮವಹಿಸುತ್ತೇವೆ "ಎಂದು ಅಶ್ವಾಸನೆ ನೀಡಿದ್ದಾರೆ