ಮಂಗಳೂರು, ಜು 29 (DaijiworldNews/HR): ನಿಷೇಧದ ನಡುವೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲು ಯತ್ನಿಸಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಹೆಜಮಾಡಿಯಲ್ಲಿ ಪೊಲೀಸರು ತಡೆ ನೀಡಿರುವ ಘಟನೆ ನಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮುತಾಲಿಕ್, ಪ್ರವೀಣ್ ಮನೆಗೆ ಹೋಗುತ್ತಿರುವಾಗ ಹೆಜಮಾಡಿಯಲ್ಲಿ ನನ್ನನ್ನು ಪೊಲೀಸರು ತಡೆದು ದ.ಕ. ಜಿಲ್ಲಾಧಿಕಾರಿ ಕೊಟ್ಟ ನಿಷೇದಾಜ್ಞೆ ಪತ್ರ ಕೈಗೆ ಕೊಟ್ಟಿದ್ದಾರೆ. ನೀವು ಮುತಾಲಿಕ್ನ ಬ್ಯಾನ್ ಮಾಡ್ತಿಲ್ಲ ಹಿಂದುತ್ವವನ್ನು ಬ್ಯಾನ್ ಮಾಡುತ್ತಿದ್ದೀರ. ನನ್ನನ್ನು ಹಿಂದೂ ವಿರೋಧಿ ಕಾಂಗ್ರೆಸ್ ಬ್ಯಾನ್ ಮಾಡಿದ್ದರೆ ಒಪ್ಪಬಹುದಿತ್ತು. ರಾಜ್ಯದ ಬಿಜೆಪಿ ನಾಯಕರು ಹಿಂದೂ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪ್ರಚೋದನ ಕಾರಿ ಭಾಷಣದಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಅವರ ಪ್ರವೇಶವನ್ನು ನಿರ್ಭಂದಿಸಿ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದರು.
ಈ ಆದೇಶದ ನಡುವೆ ಮಂಗಳೂರು ತೆರಳಿದ್ದ ಪ್ರಮೋದ್ ಮುತಾಲಿಕ್ ಅವರಿಗೆ ಹೆಜಮಾಡಿ ಟೋಲ್ ನಲ್ಲಿ ಪೊಲೀಸರು ತಡೆ ನೀಡಿದ್ದಾರೆ.