ಮಂಗಳೂರು, ಜು 29 (DaijiworldNews/MS): ರಾಜ್ಯ ಸರ್ಕಾರದ ಮೇಲೆ ನಮಗೆ ಯಾವುದೇ ನಂಬಿಕೆ ಇಲ್ಲ ಎಂದು ಸುರತ್ಕಲ್ ಬಳಿ ನಡೆದ ಫಾಝಿಲ್ ಹತ್ಯೆ ಪ್ರಕರಣದ ವಿಚಾರವಾಗಿ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ನಗರಕ್ಕೆ ಭೇಟಿ ನೀಡಿದಾಗಲೇ ಫಾಝಿಲ್ ಕೊಲೆಯಾಗಿದೆ. ಪ್ರವೀಣ್ ನೆಟ್ಟಾರು ಮನೆಗೆ ನಿನ್ನೆ ಸಿಎಂ ಭೇಟಿ ನೀಡಿದ್ದಾರೆ ಕೊಲೆಯಾದ ಮಸೂದ್ ಮನೆಗೆ ಯಾಕೆ ಬೊಮ್ಮಾಯಿ ಹೋಗಿಲ್ಲ? ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದಾಗ ಕಾನೂನು ಕೈಗೊತ್ತಿಕೊಳ್ತಾರೆ. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಪಕ್ಷಪಾತ ಮಾಡದೇ ಮೃತ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.