ಬೆಳ್ಳಾರೆ, ಜು 28 (DaijiworldNews/SM): ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಶಫೀಕ್ ಪತ್ನಿ ಅನ್ಸಿಫಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನನ್ನ ಪತಿಯನ್ನು ಉದ್ದೇಶಪೂರ್ವಕವಾಗಿ ಅರೆಸ್ಟ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ನನ್ನ ಪತಿ ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿದ್ದರು. ಅಂದು ರಾತ್ರಿ 12.30ಕ್ಕೆ ವಿಚಾರಣೆ ನಡೆಸಲೆಂದು ಕರೆದೊಯ್ದಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಪತಿ ಮನೆಯಲ್ಲೇ ಇದ್ದರು. ಮಧ್ಯಾಹ್ನ ಮನೆಗೆ ಬಂದಿದ್ದಾರೆ. ನನ್ನ ಪತಿ ಸೋಷಿಯಲ್ ವರ್ಕ್ ನಲ್ಲಿ ತೊಡಗಿಕೊಂಡಿದ್ದರು. ರಾತ್ರಿ ಮನೆಯಲ್ಲಿ ಕೊಲೆ ವಿಚಾರ ಹೇಳಿದಾಗ ಅವರಿಗೆ ಶಾಕ್ ಆಗಿತ್ತು. ಇದೀಗ ಇಲ್ಲದೇ ಇರುವ ಕೇಸ್ ಹಾಕಿ ನನ್ನ ಪತಿಯನ್ನು ಬಂಧಿಸಲಾಗಿದೆ.
ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳ್ತಿದ್ದಾರೆ. ಸುಳ್ಳು ಸುಳ್ಳು ಆರೋಪ ಮಾಡಿ ಬಂಧಿಸಿರುವುದು ಸರಿಯಲ್ಲ. ಮಾಡದ ತಪ್ಪಿಗೆ ಶಿಕ್ಷೆ ನೀಡಬಾರದು ಎಂದು ಬಂಧಿತ ಆರೋಪಿ ಶಫೀಕ್ ಪತ್ನಿ ಅನ್ಸಿಫಾ ಆರೋಪಿಸಿದ್ದಾರೆ.