ಬೆಳ್ಳಾರೆ, ಜು 27 (DaijiworldNews/SM): ನಾನು ಸಾಕಷ್ಟು ನೋವು ನುಂಗಿದ್ದೇನೆ. ನನ್ನ ಗಂಡನ ಜೀವ ಹೋಗಿದೆ. ನಾನು ಇನ್ನು ನನ್ನ ಅತ್ತೆ, ಮಾವನನ್ನು ನೋಡಿಕೊಳ್ಳಬೇಕು. ಇದಕ್ಕೊಂದು ಪರಿಹಾರ ನೀಡಬೇಕು. ಅಲ್ಲದೆ, ನನ್ನ ಗಂಡನ ಸಾವಿಗೆ ನ್ಯಾಯ ಒದಗಿಸಬೇಕು. 24 ಗಂಟೆಯೊಳಗಾಗಿ ಆರೋಪಿಗಳನ್ನು ತಂದು ನನ್ನ ಕಣ್ಣೆದುರು ನಿಲ್ಲಿಸಬೇಕೆಂದು ಮೃತ ಪ್ರವೀಣ್ ಪತ್ನಿ ಅಸಹಾಯಕರಾಗಿ ಸಚಿವರಲ್ಲಿ ಬೇಡಿಕೊಂಡಿದ್ದಾರೆ.
ಇಂದು ರಾತ್ರಿ ಸಚಿವ ಅಂಗಾರ ಅವರು ಮೃತ ಪ್ರವೀಣ್ ಮನೆಗೆ ಭೇಟಿ ನೀಡಿದರು. ಆ ವೇಳೆ ಸಚಿವರು ಭರವಸೆ ನೀಡೋದಕ್ಕೆ ಮುಂದಾದಾಗ ನಾನು ಹೇಳೋದನ್ನು ಕೇಳಿ ಸರ್ ಎಂದು ಮಾತು ಆರಂಭಿಸಿದ ಪ್ರವೀಣ್ ಪತ್ನಿ, ನಾನು ಉದ್ಯೋಗದಲ್ಲಿರುವುದು ಸಣ್ಣದಾದ ಖಾಸಗಿ ಕಂಪೆನಿಯಲ್ಲಿ. ನನ್ನ ಗಂಡನನ್ನು ಕೊಂದವರನ್ನು 24 ಗಂಟೆಯೊಳಗೆ ತಂದು ನಿಲ್ಲಿಸಬೇಕು. ಇಲ್ಲದಿದ್ದರೆ ನೀವು ಸ್ಟೇಷನ್ ಗೆ ತಂದು ನಿಲ್ಲಿಸಿ, ನಾನು ಅವರನ್ನು ನೋಡುತ್ತೇನೆ.
ಕೊಂದವರನ್ನು 24 ಗಂಟೆಯೊಳಗೆ ನೀವು ಹುಡುಕಿಸಿಕೊಡಿ. ಇನ್ನು 24 ಗಂಟೆಯಲ್ಲಿ ಕೊಂದವರು ಯಾರು ಅಂತ ಗೊತ್ತಾಗಬೇಕು. ಮೃತ ಪ್ರವೀಣ್ ಹೆಂಡತಿ ನೂತನ ಅವರು ಮನವಿ ಮಾಡಿಕೊಂಡಿದ್ದಾರೆ.