ಬೈಂದೂರು,ಜು 27 (DaijiworldNews/SM): ಅಕ್ರಮವಾಗಿ ದಾಸ್ತಾನಿರಿಸಿದ್ದ ಅನ್ನಭಾಗ್ಯದ ಅಕ್ಕಿ ಪತ್ತೆ ಹಚ್ಚಿದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಇಲ್ಲಿನ ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ವರದಿಯಾಗಿದೆ.
ಖಾಜಿ ಹಸನ್ ಎಂಬವರ ಗೋದಾಮಿನಲ್ಲಿ ಕೋಟೇಶ್ವರ ಬೀಚ್ ರಸ್ತೆಯ ಮೊಹಿದ್ದೀನ್ ಎಂಬಾತ ಅನ್ನಭಾಗ್ಯದ ಅಕ್ಕಿಯನ್ನು ದಾಸ್ತಾನಿರಿಸಿದ್ದ. ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ದಾಸ್ತಾನು ಇರಿಸಿರುವುದು ಪೊಲೀಸರಿಗೆ ಗೊತ್ತಾಗಿದೆ. ಮಾಹಿತಿಯಂತೆ ಬೈಂದೂರು ಆಹಾರ ನಿರೀಕ್ಷಕ ವಿನಯ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ದಾಸ್ತಾನಿರಿಸಿದ್ದ ಅಕ್ಕಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಒಟ್ಟು1,92,000 ರೂ. ಮೌಲ್ಯದ 80 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.