ಮಂಗಳೂರು, ಜ26(SS): ಭಾರತಾಂಬೆಯ ನೆಲ ಕಾಯುವ ನಮ್ಮ ಸೈನಿಕರ ತ್ಯಾಗ, ಬಲಿದಾನಕ್ಕೆ, ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಗಣರಾಜ್ಯೋತ್ಸವದ ಅಂಗವಾಗಿ ನಗರದ ನೆಹರೂ ಮೈದಾನದಲ್ಲಿ ಮಾತನಾಡಿದ ಅವರು, 365 ದಿನದ 24 ಗಂಟೆ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೇ ಭಾರತಾಂಬೆಯ ನೆಲಕಾಯುವ ನಮ್ಮ ಸೈನಿಕರ ತ್ಯಾಗ, ಬಲಿದಾನಕ್ಕೆ, ಬೆಲೆ ಕಟ್ಟಲು ಸಾಧ್ಯವಿಲ್ಲ. 70 ನೇ ಗಣರಾಜ್ಯೋತ್ಸವಕ್ಕೆ ಸಂಭ್ರಮದ ಸಮಾರೋಪ ನಾವೇಲ್ಲ ಅವರಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಕಡಿಮೆಯೇ . ಈ ಸೈನಿಕರ ತ್ಯಾಗ ಬಲಿದಾನ ದಿಂದಾಗಿ ಇಂದು ಭಾರತ ಜನಗತ್ತಿನಲ್ಲಿ ಗೌರವ ದಿಂದ ತಲೆ ಎತ್ತಿನಿಂತಿದೆ ಎಂದು ಹೆಮ್ಮೆಯಿಂದ ಹೇಳಿದರು.
ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ ಎಂದು ಏನಾದರೂ ಮಾತನಾಡುವುದಲ್ಲ ಅಥವಾ ಬರೆಯುವುದಲ್ಲ. ಈ ದೇಶದ ಹಿತಾಸಕ್ತಿ ವಿರುದ್ಧವಾಗಿ ಅಥವಾ ಈ ದೇಶದ ಏಕತೆ ಸಮಗ್ರತೆಗೆ ಮಾರಕವಾದ ವಿಚಾರಗಳನ್ನು ನಾವು, ಅದರಲ್ಲೂ ನಮ್ಮ ವಿದ್ಯಾವಂತ ಯುವ ಜನಾಂಗ ಎಂದೂ ಮಾತನಾಡಬಾರದು, ಬರೆಯಬಾರದು. ಒಂದು ಜವಾಬ್ದಾರಿಯುತ ಯುವ ಜನಾಂಗವೇ ದೇಶದ ಅಮೂಲ್ಯ ಸೊತ್ತಾಗಿರುತ್ತದೆ ಎಂದು ತಿಳಿಸಿದರು.
ಜಾತಿ , ಧರ್ಮ, ಭಾಷೆ, ಪಂಗಡ, ಗಳೆಂಬ ಸಂಕುಚಿತ ಭಾವನೆಯಿಂದ ಹೊರಬಂದು ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ನಾವೆಲ್ಲ ಒಟ್ಟಾಗಿ ಶ್ರಮಿಸಬೇಕು. ಭಾರತ ದೇಶದ ನಾಗರಿಕರಾಗಿ ಭವ್ಯ ಪರಂಪರೆ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ವಾಗಿದೆ ಎಂದು ತಿಳಿಸಿದರು.