ಬೆಳ್ಮಣ್, ಜು 27 (DaijiworldNews/MS): ಕಳೆದ ಕೆಲ ವರ್ಷಗಳ ಹಿಂದೆ ಸುವರ್ಣ ಕಾರಿಡರ್ ಹಾಗೂ ಟೋಲ್ ಗೇಟ್ ವಿರೋಧಿ ಪ್ರತಿಭಟಿಸಿ ಬೆಳ್ಮಣ್ ಗ್ರಾಮಸ್ಥರು ಇದೀಗ ಮತ್ತೊಮ್ಮೆ ಆಕ್ರೋಶಿತರಾಗಿದ್ದಾರೆ.
ಬೆಳ್ಮಣ್ ನ ಜಂತ್ರ ಪರಿಸರದಲ್ಲಿ ಕಳೆದ ಒಂದು ವಾದದಿಂದ ಅನಧಿಕೃತವಾಗಿ ಗುಟ್ಟಾಗಿ ಗುಡ್ಡದ ತುದಿಯಲ್ಲಿ ಕೂತು ಖಾಸಗಿ ಕಂಪನಿಯೊಂದು ಸರ್ವೆಯಲ್ಲಿ ತೊಡಗಿಕೊಂಡಿದೆ. ನಿರಂತರವಾಗಿ ವಾರದಿಂದ ಸರ್ವೆ ಕಾರ್ಯ ನಡೆಯುತ್ತಿದ್ದು ಇದೀಗ ಗ್ರಾಮಸ್ಥರಲ್ಲಿ ಜಾಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಗ್ರಾಮಸ್ಥರು ಸರ್ವೆ ಕಾರ್ಯ ನಡೆಸುವ ಸಿಬ್ಬಂದಿಯಲ್ಲಿ ವಿಚಾರಿಸಿದರೂ ಯಾವುದೇ ಸರಿಯಾದ ಮಾಹಿತಿ ದೊರಕುತ್ತಿಲ್ಲ.
ಗುಟ್ಟಾಗಿ ನಡೆಯುವ ಸರ್ವೆ : ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಗ್ರಾಮಕರಣಿಕರಿಗೆ ಜೊತೆಗೆ ಸ್ಥಳೀಯರಿಗೂ ಯಾವುದೇ ಮಾಹಿತಿ ನೀಡದೆ ಗುಟ್ಟಾಗಿ ಜಂತ್ರ ಗುಡ್ಡ ಪರಿಸರದಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಜಿಲೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವತಿಯಿಂದ ರಾಷ್ಟ್ರೀಯ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ ಅಡಿ ನೆಲದ ಗುರುತ್ವ ಮತ್ತು ಕಾಂತೀಯ ಸರ್ವೆ ಕಾರ್ಯ ಇದಾಗಿದೆ ಎಂದು ಸಿಬ್ಬಂದಿಗಳು ಮಾಹಿತಿಯನ್ನು ನೀಡಿದ್ದು ಈ ಬಗ್ಗೆ ಸರ್ವೆ ಕಾರ್ಯವನ್ನು ನಡೆಸಲು ಅಪಾರ ಜಿಲ್ಲಾಧಿಕಾರಿ ನೀಡಿರುವ ಪತ್ರವನ್ನು ಪಡೆದು ಸರ್ವೆಯನ್ನು ಗುಟ್ಟಾಗಿ ನಡೆಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಾಗಪುರದ ತಂಡ : ಕೇಂದ್ರ ಸರ್ಕಾರದ ಸರ್ವೆ ಕಾರ್ಯ ಎಂದು ಹೇಳಿಕೊಂಡು ಮಹಾರಾಷ್ಟ್ರ ನಾಗಪುರದ ಮಿನರಲ್ ಎಕ್ಸ್ ಪ್ಲೋರೇಶನ್ ಹಾಗೂ ಕನ್ಸಲ್ಟನ್ಸಿ ಲಿಮಿಟೆಡ್ ಖಾಸಗಿ ಸಂಸ್ಥೆ ಸರ್ವೆಯಲ್ಲಿ ತೊಡಗಿಕೊಂಡಿದೆ. ಹಿಂದಿಯಲ್ಲಿ ಮಾತನಾಡುವ ಸಿಬ್ಬಂದಿಗಳು ಗ್ರಾಮಸ್ಥರು ಮಾಹಿತಿಯನ್ನು ಕೇಳಿದರೆ ಬರೀ ಅಪಾರ ಜಿಲ್ಲಾಧಿಕಾರಿ ನೀಡಿರುವ ಪತ್ರವನ್ನು ಮಾತ್ರ ತೋರಿಸಿ ಸರ್ವೆ ಮುಂದಾಗುತ್ತಿದೆ.
ಖಾಸಗಿ ಹೋಟೆಲ್ ನಲ್ಲಿ ತಂಗಿರುವ ತಂಡ : ನಾಗಪುರದಿಂದ ಸರ್ವೆಕಾರ್ಯಕ್ಕೆ ಬಂದ ತಂಡ ಬೆಳ್ಮಣ್ ನ ಖಾಸಗಿ ಹೋಟೆಲ್ ನ ಲಾಡ್ಜ್ ವೊಂದರಲ್ಲಿ ತಂಗಿದ್ದು ತಂತ್ರಜ್ಞಾನದ ಮೂಲಕ ಎಲ್ಲ ಮಾಹಿತಿಯನ್ನು ಪಡೆದು ನಾಗಪುರಕ್ಕೆ ರವಾನಿಸುತ್ತಿದೆ. ಸರ್ವೆ ಮಾಡುವ ಯಂತ್ರವನ್ನು ಮಾತ್ರ ಗುಡ್ಡದ ತುದಿಯಲ್ಲಿ ನಿಲ್ಲಿಸಿ ಸಿಬ್ಬಂದಿಯೊಬ್ಬ ಮಾತ್ರ ದೂರದಲ್ಲಿ ನಿಂತು ಗುಟ್ಟಾಗಿ ಸರ್ವೆಯಲ್ಲಿ ತೊಡಗುತ್ತಾರೆ. ಸುಮಾರು 8-10 ಮಂದಿಯ ತಂಡ ಈ ಸರ್ವೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಿಲ್ಲೆಯ ನಾನಾ ಭಾಗದಲ್ಲಿ ಸರ್ವೆ : ಉಡುಪಿ ಜಿಲ್ಲೆಯ ಹಲವು ಭಾಗದಲ್ಲಿ ಈಗಾಗಲೇ ಈ ತಂಡ ಸರ್ವೆ ಕಾರ್ಯವನ್ನು ಪೂರೈಸಿದೆ. ಶಿರ್ವ ಬಂಟಕಲ್ಲು ಭಾಗದಲ್ಲಿ ಇದೇ ತಂಡ ಸರ್ವೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅಲ್ಲಿಂದ ಕಾಲ್ಕಿತ್ತ ತಂಡ ಇದೀಗ ಬೆಳ್ಮಣ್ ನಲ್ಲಿ ಸರ್ವೆಗೆ ಮುಂದಾಗಿದೆ.
ಈ ಬಗ್ಗೆಅಪಾರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಅವರ ಮಾತನಾಡಿಸಿದ್ದು ಸರ್ವೆ ಕಾರ್ಯ ಸಂದರ್ಭದಲ್ಲಿ ಸಹಕರಿಸುವಂತೆ ಪತ್ರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಲಾಗಿದೆ ಆದರೆ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಾಗೂ ತಹಶೀಲ್ದಾರ್ ರಿಗೆ ಮಾಹಿತಿಯನ್ನು ನೀಡುತ್ತೇವೆ ಎಂದರು.
ಒಟ್ಟಾರೆ ಯಾರೇ ಆಗಲೀ ಯಾವ ಉದ್ದೇಶ ಇಟ್ಟುಕೊಂಡು ಈ ಸರ್ವೆ ಕಾರ್ಯ ನಡೆಯುತ್ತಿದೆ. ಯಾರು ಇದ್ದಕ್ಕೆ ಅನುಮತಿಯನ್ನು ನೀಡಿದ್ದಾರೆ ಗೊತ್ತಿಲ್ಲ ಒಟ್ಟಿನಲ್ಲಿ ಜನರಿಗೆ ತೊಂದರೆಯಾಗುವ ಹಾಗೂ ಜಾಗ ಕಳೆದುಕೊಳ್ಳುವ ಭೀತಿ ನೀಡದಿರಲಿ ಎನ್ನುವುದು ಗ್ರಾಮಸ್ಥರಿಗೆ ಮಾತು. ಕೂಡಲೇ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
"ನಮಗೆ ಯಾವುದೇ ಮಾಹಿತಿಯಿಲ್ಲ. ಅಪಾರ ಜಿಲ್ಲಾಧಿಕಾರಿಗಳಿಂದ ಸರ್ವೆ ನಡೆಸುವ ಸ್ಥಳದಲ್ಲಿ ಸೂಕ್ತ ಸಹಕಾರ ನೀಡುವಂತೆ ಒಂದು ಪತ್ರ ಬಂದಿದೆ. ಹೆಚ್ಚಿನ ಯಾವುದೇ ಮಾಹಿತಿ ನಮಗಿಲ್ಲ "- ಸಂದೀಪ್ ,ಹಿರಿಯ ಭೂ ವಿಜ್ಞಾನಿ , ಗಣಿ ಮತ್ತು ಭೂ ವಿಜ್ಞಾನ ಇಲಾಖೆ.
"ಯಾರಲ್ಲಿ ಕೇಳಿದರೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಕಳೆದ ಒಂದು ವಾದದಿಂದ ಬೆಳ್ಮಣ್ ಜಂತ್ರ ಭಾಗದಲ್ಲಿ ಸರ್ವೆ ನಡೆಯುತ್ತಿದೆ" - ವಿಶ್ವನಾಥ್ ಪಾಟ್ಕರ್, ಗ್ರಾಮಸ್ಥ.