ಬಂಟ್ವಾಳ, ಜು 27 (DaijiworldNews/HR): ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕಡಿದು ಹತ್ಯೆಗೈದ ಹಿನ್ನೆಲೆ ಸಂಘ ಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ಬಂಟ್ವಾಳ ಹಾಗೂ ವಿಟ್ಲ ಪೇಟೆಯಲ್ಲಿನ ಹಿಂದೂ ಸಮುದಾಯದ ಅಂಗಡಿಗಳಿಗೆ ತೆರಳಿ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದು, ಕೆಲವೊಂದು ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಸ್ವಯಂಪ್ರೇರಿತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುನ್ನೆಚ್ಚರಿಕೆಯಾಗಿ ಕೆಲವೊಂದು ಶಾಲೆಗಳಿಗೆ ರಜೆ ನೀಡಲಾಗಿದ್ದು, ಬಸ್ಸು, ಆಟೋ ರಿಕ್ಷಾಗಳು ಈ ವರೆಗೆ ಎಂದಿನಂತೆ ಓಡಾಟ ನಡೆಸಿವೆ. ಜನಸಂಚಾರ ವಿರಳವಾಗುದ್ದು, ಬಂಟ್ವಾಳ ಪೊಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಎಸ್.ಐ.ಅವಿನಾಶ್, ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡದಿಂದ ಎಲ್ಲೆಡೆ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ.
ಗ್ರಾಮೀಣಭಾಗದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಾಲಗಿದೆ.
ಇನ್ನು ಘಟನೆ ನಡೆದ ಕೂಡಲೇ ಕೇರಳ ಕರ್ನಾಟಕ ಗಡಿಪ್ರದೇಶಗಳಾದ ಸಾರಡ್ಕ, ಕನ್ಯಾನ, ಸಾಲೆತ್ತೂರು ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆ ಭಿಗುಗೊಳಿಸಲಾಗಿದೆ. ಕರ್ನಾಟಕಕ್ಕೆ ಆಗಮಿಸುವ ಹಾಗೂ ಕೆರಳಕ್ಕೆ ತೆರಳುವ ವಾಹನಗಳ ಬಗ್ಗೆ ತೀವ್ರ ನಿಘಾ ಇರಿಸಲಾಗುತ್ತಿದೆ.