ಉಡುಪಿ, ಜು 27 (DaijiworldNews/DB): ತೆಂಕನಿಡೂರುವಿನ ನಿರ್ಮಾಣ ಸೈಟ್ವೊಂದರಲ್ಲಿ ಸೆಂಟ್ರಿಂಗ್ ಕೆಲಸಕ್ಕಾಗಿ ತಂದಿದ್ದ 80 ಶೀಟ್ಗಳು ಮತ್ತು ಆರು ಪಿಲ್ಲರ್ ಬಾಕ್ಸ್ಗಳನ್ನು ಕಳವುಗೈದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಗ್ರಾಮದ ದೀಪಕ್ (19), ಕಲ್ಯಾಣಪುರ ಮೂಡುತೋನ್ಸೆ ಗ್ರಾಮದ ಸಾಗರ್ (36), ಬಂಟ್ವಾಳ ಫರಂಗಿಪೇಟೆಯ ಇಮ್ತಿಯಾಜ್ (39) ಮತ್ತು ಮಂಗಳೂರು ಪಕ್ಕಲಡ್ಕದ ಮೊಹಮ್ಮದ್ ಇಕ್ಬಾಲ್ ಬಂಧಿತರು.
ಸೆಂಟರಿಂಗ್ ಕೆಲಸಕ್ಕಾಗಿ ತರಲಾಗಿದ್ದ 600 ಶೀಟ್ಗಳ ಪೈಕಿ 1,10,000 ರೂ. ಮೌಲ್ಯದ 80 ಶೀಟ್ಗಳನ್ನು ಮತ್ತು ನಾಲ್ಕು ಪಿಲ್ಲರ್ ಬಾಕ್ಸ್ ಸೆಟ್ಗಳನ್ನು ಪಕ್ಕದ ಜಯಂತಿ ಅವರ ಸೈಟ್ನಿಂದ ಕಳವು ಮಾಡಲಾಗಿದೆ ಎಂದು ತೆಂಕನಿಡೂರಿನ ಉಮೇಶ್ ಎಂಬವರು ದೂರು ನೀಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳತನಕ್ಕೆ ಬಳಸಿದ್ದ 1, 80, 000 ರೂ. ಮೌಲ್ಯದ ಒಂದು ಗೂಡ್ಸ್ ವಾಹನ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.