ಮಂಗಳೂರು, ಜು 26 (DaijiworldNews/SM): ದ.ಕ ಜಿಲ್ಲೆಯ ಅಭಿವೃದ್ಧಿಗೆ ನೈತಿಕ ಪೊಲೀಸ್ಗಿರಿ ಮಾರಕವಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೇವಲ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದರಿಂದ ಹಿಂದುತ್ವಕ್ಕೂ, ಮುಸ್ಲಿಮರಿಗೂ ಲಾಭ ಇಲ್ಲ. ಇಂತಹ ಕೃತ್ಯಗಳಿಂದ ದ.ಕ. ಜಿಲ್ಲೆಯ ಹಿಂದೂಗಳು, ಮುಸ್ಲಿಮರೂ ತಪ್ಪು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ನಡೆಸಿರುವವರು ಸೇರಿ ದ.ಕ ಜಿಲ್ಲೆಯನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಜಿಲ್ಲೆಗೆ ಹೂಡಿಕೆ, ನೌಕರಿ ಯಾವುದೂ ಬರುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಲಾರಂಭಿಸಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವರುಗಳು ನಗರದ ಜನರಲ್ಲಿ ಭಯ ಹುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಯಾವುದೇ ಉದ್ಯೋಗ ನಿರ್ಮಾಣವಾಗಲ್ಲ. ಯಾವುದೇ ಕಂಪೆನಿಗಳು ಹೂಡಿಕೆ ಮಾಡಲ್ಲ. ಜಿಲ್ಲೆಯ ಹೆಸರು ಇದರಿಂದ ಕೊಡುತ್ತದೆಯೇ ಹೊರತು ಜಿಲ್ಲೆಗೆ ಒಳಿತಾಗಲ್ಲ ಎಂದರು.