ಸುರತ್ಕಲ್, ಜು 26 (DaijiworldNews/SM): ಪಂಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಮೋಜುಮಸ್ತಿಗೆ ಬಜರಂಗ ದಳದಿಂದ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಬಜರಂಗ ದಳದವರು ದಾಳಿ ನಡೆಸಿಲ್ಲ ಬದಲಾಗಿ ಅಪ್ರಾಪ್ತರಿದ್ದಾರಾ ಹಾಗೂ ಅವರಿಗೆ ಮದ್ಯ ನೀಡಲಾಗುತ್ತಿದೆಯೇ ಎಂದು ಪರಿಶೀಲನೆಗೆ ತೆರಳಿದ್ದರು ಎಂದಿದ್ದಾರೆ.
ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಜೊತೆ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿದ್ದಾರೆಯೇ ಎಂದು ಸಂಘಾಟನೆಯವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಮಿಷನರ್ ಜೊತೆ ಚರ್ಚಿಸಿದ್ದೇನೆ ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ.
ಪಬ್ ಅಥವಾ ಬಾರ್ ನಲ್ಲಿ ಅಪ್ರಾಪ್ತರಿಗೆ ಮದ್ಯ, ಸಿಗರೇಟು ಮತ್ತಿತರ ಅಮಲು ಪದಾರ್ಥ ನೀಡುವುದು ಕಾನೂನು ಪ್ರಕಾರ ಅಪರಾಧ. ಬಾರ್, ಪಬ್ ಗಳು ಅದನ್ನು ಉಲ್ಲಂಘಿಸಿದಲ್ಲಿ ಇಂತಹ ಘಟನೆಗಳು ಜರುಗುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಅವರು ತಿಳಿಸಿದ್ದಾರೆ.