ಮಂಗಳೂರು, ಜು 26 (DaijiworldNews/DB): ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರ ನಟನಾ ಕೌಶಲ್ಯಕ್ಕೆ ದ.ಕ. ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರವಿಂದ ಬೋಳಾರ್ ಅವರು ಜುಲೈ 25ರ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಯವರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಬೋಳಾರ್ ಅವರ ನಟನೆ, ಸಂಭಾಷಣಾ ಪ್ರಾವೀಣ್ಯತೆ ಮತ್ತು ಸುದೀರ್ಘ ವರ್ಷಗಳಿಂದ ಜನರನ್ನು ಮನರಂಜಿಸುವ ಅವರ ವೃತ್ತಿಪರ ಕೌಶಲ್ಯದ ಬಗ್ಗೆ ಜಿಲ್ಲಾಧಿಕಾರಿಯವರು ಮೆಚ್ಚುಗೆಯ ಮಾತುಗಳನ್ನಾಡಿದರು.