ಉಡುಪಿ, ಜು 25 (DaijiworldNews/HR): ಉಡುಪಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169ಎ ಯಲ್ಲಿನ ಹೊಂಡ ಗುಂಡಿಗಳ ರಿಪೇರಿಯ ಕುರಿತಾಗಿ ನಾಳೆ ಸಭೆ ನಡೆಸುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸುಮಾರು 14 ದಿನಗಳ ಕಾಲ ನಿರಂತರವಾಗಿ ಮಳೆ ಬಂದಿದೆ ಹೀಗಾಗಿ ರಾಷಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆ ಉಂಟಾಗಿದೆ. ಕಳೆದ ಸಭೆಯಲ್ಲಿ ಕೂಡಾ ಈ ಕುರಿತಾಗಿ ನಾವು ಸ್ವಷ್ಟ ನಿರ್ದೇಶನ ನೀಡಿದ್ದೆವು. ನಮ್ಮ ನಿರ್ದೇಶನದ ಅಡಿಯಲ್ಲಿ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುವುದಾಗಿ ಕೂಡಾ ಪರಿಶೀಲಿಸುತ್ತೇವೆ ಎಂದರು.
ಜಿಲ್ಲಾಡಳಿತದ ಸಭೆಗಳಿಗೆ ಗೈರು ಹಾಜರಾಗುತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕೈಗೊಂಡ ಕ್ರಮಗಳ ಕುರಿತಾಗಿ ಮಾತನಾಡಿದ ಅವರು “ಈ ಕುರಿತಾಗಿ ಉಸ್ತುವಾರಿ ಸಚಿವರ ನಿರ್ದೇಶನದಂತೆ ಈಗಾಗಲೇ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಮಳೆ ಅವಾಂತರಗಳಿಂದಾಗಿ ಒಟ್ಟು 166 ಕೋಟಿ ರುಪಾಯಿನಷ್ಟು ನಷ್ಟ ಸಂಭವಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ತಿಳಿಸಿದರು.
ಪತ್ರಕರ್ತರೊಂದಿಗೆ ಈ ಕುರಿತು ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 166 ಕೋಟಿಯಷ್ಟು ನಷ್ಟ ಸಂಭವಿಸಿದೆ. ತುರ್ತು ಪರಿಹಾರಕ್ಕಾಗಿ ಜಿಲ್ಲಾಡಳಿತದ ಬಳಿ ಸಾಕಷ್ಟು ಹಣ ಇದ್ದು ಅದನ್ನು ಉಪಯೋಗಿಸಿಕೊಂಡು ಪರಿಹಾರ ಕಾರ್ಯಗಳನ್ನು ಕೈಗೊಳ್ಲುತ್ತಾ ಇದ್ದೇವೆ. ಈಗಾಗಲೇ ಮಳೆ ಹಾಣಿಯ ವಿವರಗಳನ್ನು ಸರಕಾರಕ್ಕೆ ಕಳುಹಿಸಲಾಗಿದೆ ಎಂದರು.
ಜಿಲ್ಲಯಲ್ಲಿ ಪಮಚಾಯತ್ ರಾಜ್ ಇಂಇನಿಯರಿಂಗ್ ವಿಭಾಗದ ಅಡಿಯಲ್ಲಿ 907.85 ಕಿಲೋಮೀಟರ್ ರಸ್ತೆ ಹಾನಿ ಆಗಿದೆ. ಮೆಸ್ಕಾಂ ಅಡಿಯಲ್ಲಿ 1283 ಕಂಬಗಳು, 200 ಪರಿವರ್ತಕಗಳು ಮತ್ತು ಒಟ್ಟು 35.90 ಕಿಲೋ ಮೀಟರ್ ವಿದ್ಯುತ್ ಲೈನಿಗೆ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು 1132.98 ಕಿಲೋ ಮೀಟರ್ ರಸ್ತೆ ಹಾನಿಗೊಳಗಾಗಿದೆ. 41 ಮನೆಗಳು ಸಂಪೂರ್ಣ ಹಾನಿ ಯಾಗಿದ್ದು, ಸುಮಾರು 265 ಮನೆಗಳು ಭಾಗಶಃ ಹಾನಿಗೊಳಗಾಗಿವೆ.