ಮಂಗಳೂರು, ಜ26(SS): ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ನಗರದ ಕದ್ರಿ ಸಾರ್ವಜನಿಕ ಮೈದಾನದ ಬಳಿ ಇಕೊನಾಮಿಕ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕೊಡಿಯಾಲ್ಬೈಲ್ನ ಶರಾಜ್, ಕದ್ರಿಯ ಚಿರಾಗ್, ಕಾರ್ಸ್ಟ್ರೀಟ್ ನಿವಾಸಿಗಳಾದ ಅನಂತ್, ಪವನ್ ಬಂಧಿತ ಆರೋಪಿಗಳು.
ಗಾಂಜಾ ಸೇವನೆ ಆರೋಪದಲ್ಲಿ ಕುಶಾಲನಗರ ನಿವಾಸಿ ರೋಹನ್, ಕಾಂಜಂಗಾಡ್ ನಿವಾಸಿ ಸದಾಶಿವ ಕಾಮತ್, ಬಿಜೈ ಕಾಪಿಕಾಡು ನಿವಾಸಿ ಭದ್ರೇಶ್, ಕೊಟ್ಟಾರ ನಿವಾಸಿ ಸುನೀಲ್ ಭಟ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದುಕೊಂಡಿರುವ ಆರೋಪಿಗಳಿಂದ 14,900 ರೂ. ಮೌಲ್ಯದ ಸುಮಾರು 500 ಗ್ರಾಂ ತೂಕದ ಗಾಂಜಾ, 58 ಸಾವಿರ ರೂ. ಮೌಲ್ಯದ 4 ಮೊಬೈಲ್, ಸುಮಾರು 10 ಸಾವಿರ ರೂ. ಮೌಲ್ಯದ ಅಮಲಿನ ಮಾತ್ರೆಗಳು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ, 3,800 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸೊತ್ತುಗಳ ಮೌಲ್ಯ 1,35,700 ರೂ. ಎಂದು ಅಂದಾಜಿಸಲಾಗಿದೆ.