ಉಡುಪಿ, ಜು 24 (DaijiworldNews/HR): ಉಡುಪಿ ಕೆಳ ಪರ್ಕಳ ರಾಷ್ಟ್ರೀಯ ಹೆದ್ದಾರಿ 169ಎ ಯ ಅವ್ಯಸ್ಥೆಯನ್ನು ವಿರೋಧಿಸಿ ಮನೋವೈದ್ಯರಾದ ಡಾ ಪಿ ಭಂಡಾರಿಯವರ ನೇತೃತ್ವದಲ್ಲಿ ಸಮಾನ ವಯಸ್ಕರೆಲ್ಲರೂ, ಸ್ಥಳೀಯರು, ವಾಹನ ಚಾಲಕರು ಸೇರಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಡಾ ಪಿ ಭಂಡಾರಿ, ಈಗಾಗಲೇ ಉಡುಪಿ ಶಾಸಕರು ನವೆಂಬರ್ 2020ರಲ್ಲಿ, ಮುಂದಿನ ಮೇ ಒಳಗೆ ಪರ್ಕಳ ರಸ್ತೆ ಕಾಮಗಾರಿ ಪೂರ್ಣವಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಜನಪ್ರತಿನಿಧಿಗಳು ಯಾವಾಗಲು ಚುನಾವಣೆಗೆ ಬರುವಾಗ ಯುದ್ಧ ಕಲೆ ಶಸ್ತ್ರಾಭ್ಯಾಸ ಎನ್ನುವಂತೆ ಕೆಲಸ ಮಾಡ್ತಾರೆ ಎಂದರು.
ಇನ್ನು ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಓಟು ಕೇಳುವ ಬರುವ ಮೊದಲು ರಸ್ತೆ ರೆಡಿ ಮಾಡಿ. ಪರ್ಕಳ, ಎಂ ಜಿ ಎಂ, ಇಂದ್ರಾಳಿ, ಅಂಬಾಗಿಲು ಕಡೆಗಳಲ್ಲಿ ರಸ್ತೆ ಹಾಳಾಗಿದ್ದು ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲ. ಬಿಜೆಪಿ ಕಾಂಗ್ರೆಸ್ ಎಲ್ಲವು ಬಿಲ್ಡರ್ ಗಳಿಂದ ತುಂಬಿ ಹೋಗಿದೆ ಎಂದು ನೇರವಾಗಿ ಆರೋಪಿಸಿದರು.
ಮುಂದಿನ 15 ದಿನದೊಳಗೆ ರಸ್ತೆ ದುರಸ್ತಿ ಮಾಡದಿದ್ದರೆ ಪರ್ಕಳ ರಸ್ತೆ ಒಲಿಂಪಿಕ್ಸ್, ಕಂಬಳ , ಕೆಸರು ಗದ್ದೆ ಓಟ ಮಾಡ್ತೇವೆ. ಪ್ರತಿಭಟನೆ ಮಾಡಿ ಜೈಲಿಗಾದ್ರೂ ಹೋಗ್ತೇವೆ, ೫೦೦ ರೂ ಸಿಗುತ್ತೆ. ಆದರೆ ಈ ಕೆಟ್ಟ ರಸ್ತೆಯ ಸಂಚಾರ ಬೇಡ ಎಂದು ಜನಪ್ರತಿನಿಧಿಗಳ, ಅಧಿಕಾರಿಗಳ ಬಗ್ಗೆ ವ್ಯಂಗ್ಯವಾಡಿದರು . ಇದು ಕೇವಲ ಎಚ್ಚರಿಕೆಯ ಪ್ರತಿಭಟನೆ ಎಂದರು.