ಉಡುಪಿ, ಜ 26(SM): ಮರಳು ಹೋರಾಟ ವಿಚಾರವಾಗಿ ಜಿಲ್ಲಾಡಳಿತದ ಕಡೆಗಣನೆಯನ್ನು ವಿರೋಧಿಸಿ ಮತ್ತೆ ಅಹೋರಾತ್ರಿ ಧರಣಿಗೆ ಶಾಸಕ ರಘುಪತಿ ಭಟ್ ಕರೆ ನೀಡಿದ್ದಾರೆ.
ಈ ಬಗ್ಗೆ ಬನ್ನಂಜೆ ಗುರುನಾರಾಯಣ ಸ್ವಾಮಿ ಮಂದಿರದಲ್ಲಿ ಶುಕ್ರವಾರ ನಡೆದ ಮರಳು ಹೋರಾಟ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಫೆ.28ರ ಬೆಳಿಗ್ಗೆ 10 ಗಂಟೆಯಿಂದ ಅಹೋರಾತ್ರಿ ಅನಿರ್ಧಿಷ್ಟಾವಧಿ ಧರಣಿ ಜಿಲ್ಲಾಡಳಿತದ ವಿರುದ್ಧ ನಡೆಸುವುದೆಂದೂ ಹಾಗೂ ಮರಳುಗಾರಿಕೆಗೆ ಅನುಮತಿ ನೀಡುವವರೆಗೂ ಹೋರಾಟ ನಡೆಸುವುದೆಂದು ಸಮಿತಿಯ ಸಭೆಯಲ್ಲಿ ಸರ್ವಾನುಮತದಲ್ಲಿ ನಿರ್ಣಯಿಸಿದ್ದಾರೆ .