ಪುತ್ತೂರು, ಜು 24 (DaijiworldNews/HR): ಮಗುವಿಗೆ ಜನ್ಮ ನೀಡಿ ಒಂದು ದಿನದ ಬಳಿಕ ತಾಯಿಗೆ ವಿಪರೀತ ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜು.23 ರಂದು ನಡೆದಿದೆ.
ಪಡ್ನೂರು ಗ್ರಾಮದ ಪರಮಾರು ಮನೆಯ ಕೂಸಪ್ಪ ಗೌಡ ಅವರ ಪತ್ನಿ ಮೋನಮ್ಮ (36) ಮೃತ ಮಹಿಳೆ.
ಜುಲೈ 21 ರಂದು ಎರಡನೇ ಮಗುವಿನ ಹೆರಿಗೆಗೆಂದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 22 ರಂದು ಸಂಜೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಬಾಣಂತಿ ಆರೋಗ್ಯದಲ್ಲಿ ಏರುಪೇರಾಗಿ ವೈದ್ಯರ ಸಲಹೆಯಂತೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ.