ಬೆಳ್ತಂಗಡಿ, ಜು 23 (DaijiworldNews/HR): ಆರು ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿದಂತೆ ಆರೋಪಿಯ ವಿರುದ್ದ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ನಾರಾಯಣ ನಾಯ್ಕ್ (47) ಎಂದು ಗುರುತಿಸಲಾಗಿದೆ.
ನಾರಾಯಣ ನಾಯ್ಕ್ ಎಂಬಾತ ಬಾಲಕಿಯನ್ನು ಗೆಣಸು ಕೊಡುವುದಾಗಿ ಮನೆಗೆ ಬರ ಹೇಳಿ ಆಕೆಯನ್ನು ಎತ್ತಿಕೊಂಡು ಅವರ ಮನೆಯಲ್ಲಿದ್ದ ಮಂಚದಲ್ಲಿ ಮಲಗಿಸಿ ಲೈಂಗಿಕ ಸಂಪರ್ಕ ನಡೆಸಿದ್ದು, ನೊಂದ ಬಾಲಕಿಯು ಮನೆಯಲ್ಲಿ ಈ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದು, ಮಗುವಿನ ಮುಂದಿನ ಭವಿಷ್ಯ ಮತ್ತು ಮರ್ಯಾದೆ ಬಗ್ಗೆ ಆಲೋಚಿಸಿ ಹೆತ್ತವರು ಆಸ್ಪತ್ರೆಗೂ ಹೋಗದೇ ದೂರೂ ನೀಡದೇ ಇದ್ದರು. ಆದರೆ ಆ ನಂತರದ ದಿನಗಳಲ್ಲಿ ಕೂಡಾ ಮಗುವನ್ನು ಕರೆದಿರುವುದರಿಂದ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದು, ನೊಂದ ಬಾಲಕಿಯ ಮೇಲೆ ಲೈಂಗಿಕ ಸಂಪರ್ಕವನ್ನು ನಡೆಸಿ ದೌರ್ಜನ್ಯ ಎಸಗಿದ ನಾರಾಯಣ ನಾಯ್ಕನ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.
ಇನ್ನು ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಯುವಕರ ತಂಡವೊಂದು ಶುಕ್ರವಾರದಂದು ಆರೋಪಿಯ ಮೇಲೆ ಹಲ್ಲೆ ನಡೆಸಿದ್ದು ಈ ಸಂದರ್ಭ ಜಗಳ ತಡೆಯಲು ಬಂದ ವ್ಯಕ್ತಿಗೆ ಹಲ್ಲೆ ನಡೆದಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿರುವ ಘಟನೆ ಕೂಡ ನಡೆದಿತ್ತು.