ಉಡುಪಿ, ಜು 23 (DaijiworldNews/HR): ಕಾಂಗ್ರೆಸ್ನ ಶಕ್ತಿ ಮತ್ತು ಒಗ್ಗಟ್ಟಿನ ಪ್ರದರ್ಶನ ನಡೆಯಲಿದೆ. ಸಿದ್ದರಾಮೋತ್ಸವ ಒಂದು ವ್ಯಕ್ತಿಯ, ಒಂದು ಪಕ್ಷದ ವೈಭವೀಕರಣ ಅಲ್ಲ. ಮುಂಬರುವ ರಾಜ್ಯ ಚುನಾವಣೆಗೆ ಚಿಂತನ ಸಭೆ ಎಂದರೆ ತಪ್ಪಾಗಲಾರದು. ಸಿದ್ಧರಾಮಯ್ಯನವರ ಕೆಲಸಕ್ಕೆ ಗೌರವ ಕೊಡುವ ಒಂದು ಕಾರ್ಯಕ್ರಮ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬ ಆಚರಿಸುವ ವೈಯಕ್ತಿಕ ಆಸೆ ಇಲ್ಲ. ಅವರ ಅಭಿಮಾನಿಗಳು ಮತ್ತು ಪಕ್ಷದ ತೀರ್ಮಾನದಂತೆ ಕಾರ್ಯಕ್ರಮ ನಡೆಯುತ್ತದೆ, ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ಸ್ಪಷ್ಟ ಪಡಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಿದ್ದರಾಮಯ್ಯ 75 ನೇ ಹುಟ್ಟುಹಬ್ಬ ಕಾಂಗ್ರೆಸ್ ಸಮಾವೇಶ ಚಿಂತನಾ ಸಭೆಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಈ ರಾಜ್ಯದ ಮಹಾನ್ ವ್ಯಕ್ತಿ. ಐದು ವರ್ಷ ಮುಖ್ಯಮಂತ್ರಿ ಆಗಿದ್ದರು, ಕಾಂಗ್ರೆಸ್ ಬೆಳವಣಿಗೆಗೆ ಸಾಕಷ್ಟು ಕೊಡುಗೆ ಕೊಟ್ಟವರು. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಿದ ವ್ಯಕ್ತಿ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಈ ಕಾರ್ಯಕ್ರಮ ಬಹಳ ಮುಖ್ಯ. ಕಾರ್ಯಕ್ರಮದ ಮೂಲಕ ಮುಂಬರುವ ರಾಜ್ಯ ಚುನಾವಣೆಗೆ ತಯಾರಿ ರೂಪದಲ್ಲಿ ನಡೆಯುತ್ತಿದೆ. ಇದರಲ್ಲಿ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಕರಾವಳಿಯ ಪಕ್ಷದ ಕಾರ್ಯಕರ್ತರು ಭಾಗವಹಿಸಬಹುದು ಎಂಬುದು ತಿಳಿಸಲು ಬಂದಿದ್ದೆನೆ ಮತ್ತು ಬರುವ ಮುಂದಿನ ಚುನಾವಣೆಯ ತಯಾರಿಯ ಸಭೆಯನ್ನ ನಡೆಸಲು ಬಂದಿರುವುದಾಗಿ ತಿಳಿಸಿದರು.
ಕಾಂಗ್ರೆಸ್ನಲ್ಲಿ ತುಳಿಯುವ ವ್ಯವಸ್ಥೆ ಎಂದೆಂದಿಗೂ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ನಡುವೆ ಗೊಂದಲ ಇಲ್ಲ. ಗುಂಡೂರಾವ್ ಮತ್ತು ಬಂಗಾರಪ್ಪ ನಡುವೆಯೂ ಅನ್ಯೋನ್ಯ ರಾಜಕಾರಣ ಇತ್ತು. ಸಿದ್ದರಾಮಯ್ಯ ಬರ್ತಡೇಗೆ ರಾಜ್ಯದ ಜನರೇ ಮುಂದಿನ ಚುನಾವಣೆಯಲ್ಲಿ ಗಿಫ್ಟ್ ಕೊಡಬೇಕು, ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿಕೆ ನೀಡಿದರು
ಶಿಕಾರಿಪುರ ಕ್ಷೇತ್ರಕ್ಕೆ ನೂತನ ಉತ್ತರಾಧಿಕಾರಿ ವಿಚಾರವಾಗಿ ಮಾದ್ಯಮದವರು ಪ್ರಶ್ನಿಸಿದಾಗ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ಉಡುಪಿಯಲ್ಲಿ ಪ್ರತಿಕ್ರಿಯಿಸಿ, ಸಾಮರ್ಥ್ಯ ಇದ್ದವರು ರಾಜಕೀಯ ಮಾಡಲಿ ಅಭ್ಯಂತರವಿಲ್ಲ. ನಾವು ಕೂಡ ನಮ್ಮ ತಂದೆಯ ಹೆಸರಿನಲ್ಲಿ ರಾಜಕೀಯಕ್ಕೆ ಬಂದಿದ್ದೇವೆ. ರಾಜಕೀಯಕ್ಕೆ ಬರುವುದು ಕೊಳ್ಳೆಹೊಡೆಯಲೋ? ಜೈಲಿಗೆ ಹೋಗಲೋ? ಜನಸೇವೆಗೋ ಎಂಬೂದು ಅವರಿಗೆ ಬಿಟ್ಟದ್ದು. ವಿಜಯೇಂದ್ರ ಅವರಿಗೆ ಒಳ್ಳೇದಾಗಲಿ, ದೇವರು ಒಳ್ಳೇದು ಮಾಡಲಿ ಎಂದು ಹಾರೈಸುತ್ತೇನೆ. ನನಗೂ ಅವರು ಹೀಗೆ ಹಾರೈಸುತ್ತಿದ್ದರು, ಎಂದರು.