ಉಡುಪಿ, ಜು 23 (DaijiworldNews/HR): ಕಳೆದ ಹಲವಾರು ವರ್ಷಗಳಿಂದ ವಾಣಿಜ್ಯ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಉಡುಪಿ, ಮಂಗಳೂರು ಹಾಗೂ ಬೆಂಗಳೂರು ನಗರಗಳಲ್ಲಿ ತನ್ನ ಕಾರ್ಯಕ್ಷೇತ್ರವನ್ನು ಹೊಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೌಂಡೇಶನ್ ನ ಆನ್ ಲೈನ್ ಕ್ಲಾಸ್ ಗಳು ಆರಂಭವಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ 24 ವರ್ಷಗಳ ಅನುಭವವಿರುವ ಈ ಸಂಸ್ಥೆಯು ಅಧ್ಯಕ್ಷ್ಯರಾದ ಸಿಎ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಆನ್ ಲೈನ್ ತರಗತಿಗಳಲ್ಲಿ ಅಭ್ಯಾಸದ ನೂತನ ವಿಧಾನಗಳ ಜೊತೆಗೆ ರಾಷ್ಟ್ರದ ಬೇರೆ ಬೇರೆ ಭಾಗದ ಪ್ರಸಿದ್ದ ಮತ್ತು ಅನುಭವೀ ವಿಷಯ ತಜ್ಞರುಗಳು ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಿದ್ದಾರೆ. ಎಲ್ಲಾ ಸ್ಟಡೀ ಮೆಟಿರಿಯಲ್ ಗಳು ಕೂಡಾ ವಿದ್ಯಾರ್ಥಿಗಳಿಗೆ ದೊರೆಯಲಿದ್ದು ಲೈವ್ ಮತ್ತು ರೆಕಾರ್ಡೆಡ್ ತರಗತಿಗಳು ಲಭ್ಯವಿವೆ. ಪರೀಕ್ಷೆಗೆ ಪೂರಕವಾಗಿ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವ ವಿಧಾನವನ್ನು ಕೂಡಾ ಇಲ್ಲಿ ತಿಳಿಸಿಕೊಡಲಾಗುತ್ತದೆ.
ಜುಲೈ 25 ರಿಂದ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನದ ಕ್ಲಾಸ್ ಗಳು ಆನ್ ಲೈನ್ ಮೂಲಕ ಆರಂಭವಾಗಲಿದೆ. ಇದರ ಬಗ್ಗೆ ತಿಳಿಸುವ ಸಲುವಾಗಿ ಜುಲೈ 24 ರಂದು ಬೆಳಗ್ಗೆ ಗಂಟೆ 10 ರಿಂದ 12 ಗಂಟೆ ಯವರೆಗೆ ಆನ್ ಲೈನ್ ಮೂಲಕ ಮಾಹಿತಿ ಕಾರ್ಯಗಾರ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ತ್ರಿಶಾ ಸಂಸ್ಥೆಯನ್ನು ಸಂಪರ್ಕಿಸಬಹುದು.