ಮಂಗಳೂರು,ಜ 25(MSP): ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ. 10ರಿಂದ ಫೆ. 17ರಂದು ನಡೆಯಲಿರುವ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಇದಕ್ಕೆ ಭರತ ಸಿದ್ದತೆ ನಡೆಯಲಿದೆ ಎಂದು ಕುದ್ರೋಳಿ ಕ್ಷೇತ್ರದ ರೂವಾರಿ ಬಿ.ಜನಾರ್ದನ ಪೂಜಾರಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘13ರಂದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವಗಿರಿ ಮಠದ ಶ್ರೀಸುಗುದಾನಂದ ತಂತ್ರಿ ಮತ್ತು ಶ್ರೀ ಕ್ಷೇತ್ರದ ಮುಖ್ಯ ಅರ್ಚಕ ಲಕ್ಷ್ಮಣ ಶಾಂತಿ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ. ಫೆ. 17ರಂದು ರಾಜಗೋಪುರ ಶಿಖರ ಪ್ರತಿಷ್ಠೆ, ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ’ ಎಂದರು.
ಫೆ 10ರಂದು ಭಾನುವಾರ ಸಂಜೆ 6.30 ರಿಂದ ಗುರುಪ್ರಾರ್ಥನೆ, ಆಚಾರ್ಯ ವರ್ಣ, ಋತ್ವಿಜರ ಸ್ವಾಗತ, ಮಹಾಪೂಜೆ, ಅಂಕುರಪೂಜೆ, ಪುಣ್ಯಾಹ ಪೂಜೆ, 11 ರಂದು ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಭಗವತಿ ಪೂಜೆ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ವಿಶ್ವಶಾಂತಿ ಹೋಮ, ಕುಂಡ ಶುದ್ಧಿ, ಮಹಾಪೂಜೆ ನಡೆಯಲಿದೆ.
12 ರಂದು ಸಂಜೆ 6ರಿಂದ ದೀಪಾರಾಧನೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹ, ವಾಸ್ತು ಕಲಶಾಭಿಷೇಕ, ಕುಂಡ ಶುದ್ಧಿ, ಮಹಾಪೂಜೆ, 13ರಂದು ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಪಂಚಗವ್ಯ, ಪಂಚ ವಿಶಂತಿ, ಕಲಶ ಮಹಾಪೂಜೆ, ಸಂಜೆ ಮಂಗಳೂರು ನೆಹರೂ ಮೈದಾನದಿಂದ ‘ಬೃಹತ್ ಹೊರೆಕಾಣಿಕೆ’ ಮೆರವಣಿಗೆ.
14ರಂದು ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ತ್ರಿಕಾಲ ಭಗವತಿ ಪೂಜೆ, ಶಾಂತಿಹೋಮ, ಅದ್ಭುತ ಶಾಂತಿಹೋಮ, ಕಲಶಾಭಿಷೇಕ, ಮಹಾಪೂಜೆ, ಸಂಜೆ 6ರಿಂದ ದೀಪಾರಾಧನ, ಜಲಾಧಿವಾಸ, ಸ್ವಶಾಂತಿ ಹೋಮ, ಕಲಶಾಭಿಷೇಕ, ಕುಂಡ ಶುದ್ಧಿ.
15 ರ ಬೆಳಿಗ್ಗೆ ಗಂಟೆ 8.15ರ ಕುಂಭ ಲಗ್ನ ದಲ್ಲಿ ಗರ್ಭಗುಡಿಯ ಶಿಖರ ಪ್ರತಿಷ್ಠೆ, ತ್ರಿಕಾಲ ಗುರುಪೂಜೆ, ಚಂಡಿಕಾ ಹೋಮ, ಜಲೋದ್ಧಾರ ಕ್ರಿಯ, ವಾಹನ ಬಿಂಬ ಶುದ್ಧಿ ನಡೆಯಲಿದೆ. 16ರಂದು ತ್ರಿಕಾಲ ಅಂಕುರ ಪೂಜೆ, ಜಲದ್ರೋಣಿ ಪೂಜೆ, ಕುಂಭೇಶ ಕರ್ಕರಿ ಪೂಜೆ, ಮಹಾಪೂಜೆ ನಡೆಯಲಿದೆ. 17ರ ಮಧ್ಯಾಹ್ನ 12.15ಕ್ಕೆ ವೃಷಭ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದರು.
್ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.13ರಂದು ಸಂಜೆ 4 ಗಂಟೆಯಿಂದ ವೈಭವದ ಹೊರೆಕಾಣಿಕೆ ಮೆರವಣಿಗೆ ಮಂಗಳೂರು ನೆಹರೂಮೈದಾನದಿಂಡ ನಡೆಯಲಿದೆ.ಕರಾವಳಿ ಜಿಲ್ಲೆ ಮಾತ್ರವಲ್ಲದೇ ನಾನಾ ಕಡೆಯಿಂದ 500ಕ್ಕೂ ಅಧಿಕ ವಾಹನದಲ್ಲಿ ಹೊರೆಕಾಣಿಕೆ ಆಗಮಿಸಲಿದ್ದು 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್ ಆರ್. ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿ ಸದಸ್ಯ ರವಿಶಂಕರ್ ಮಿಜಾರ್, ಕ್ಷೇತ್ರ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಬಿ.ಜಿ. ಸುವರ್ಣ, ದೇವೇಂದ್ರ ಪೂಜಾರಿ, ಡಿ.ಡಿ. ಕಟ್ಟೆಮಾರ್, ಡಾ. ಅನುಸೂಯಾ ಬಿ.ಟಿ. ಸಾಲ್ಯಾನ್, ಮಾಜಿ ಸಚಿವೆ ಸುಮಾ ವಸಂತ್, ಚಂದ್ರಶೇಖರ್, ಗಣೇಶ್ ಪೂಜಾರಿ ಉಪಸ್ಥಿತರಿದ್ದರು.