ಮಂಗಳೂರು, ಜ 25(MSP): ಕಂಬಳಕ್ಕೆ ತಡೆ ಕೋರಿ ಪೆಟಾ ಸಂಸ್ಥೆ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜ.25 ಕ್ಕೆ ನಡೆಯಬೇಕಾಗಿದ್ದು, ಅದು ಮುಂದಕ್ಕೆ ಹೋಗಿ, ಫೆ.25 ರಂದು ನಿಗದಿಯಾಗಿದೆ.
ಜ. 25ರಂದು ವಿಚಾರಣೆ ನಿಗದಿಯಾಗಿದ್ದರೂ ಅದು ಲಿಸ್ಟಿಂಗ್ನಲ್ಲಿ ನಮೂದು ಆಗದಿದ್ದರಿಂದ ವಿಚಾರಣೆ ಮುಂದಕ್ಕೆ ಹೋಗಿದೆ. ಹೀಗಾಗಿ ಕಂಬಳ ಮೇಲಿದ್ದ ಆತಂಕದ ಛಾಯೆಯೂ ದೂರವಾಗಿದೆ. ಕಂಬಳ ನಡೆಸಲು ಮಾಡಿರುವ ಕರ್ನಾಟಕ ಪ್ರಾಣಿಹಿಂಸೆ ತಡೆ ಕಾಯ್ದೆ -2017 ( ಎರಡನೇ ತಿದ್ದುಪಡಿ) ರದ್ದುಗೊಳಿಸಲು ಹಾಗೂ ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆ ವಿರುದ್ದವಾಗಿ ಪೆಟಾ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಗಳ ಒಟ್ಟು ವಿಚಾರಣೆಯನ್ನು ಸುಪ್ರೀಂನ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿದ್ದು, ಫೆ. 5ರಂದು ವಿಚಾರಣೆಗೆ ಬರಲಿದೆ.