ಬೆಂಗಳೂರು, ಜ 25(MSP): ಅತಿವೃಷ್ಟಿ ಹಾಗೂ ಪ್ರಾಕೃತಿಕ ವಿಕೋಪದಿಂದ ಮನೆ ಮಠ ಕಳೆದುಕೊಂಡ ಕೊಡಗು ಸಂತ್ರಸ್ತಮ್ ಫಲಾನುಭವಿಗಳಿಗೆ ನೀಡಲು 100 ಮನೆ ನಿರ್ಮಾಣ ಮಾಡಲು ಮೈಸೂರು ಧರ್ಮಕ್ಷೇತ್ರದ ಜತೆ ಸೇರಿ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಮಹಾಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಆರ್ಚಾಬಿಷಪ್ ಡಾ| ಪೀಟರ್ ಮಚಾದೋ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ ಅವರು, ಭೂಕುಸಿತದಿಂದ ಕೊಡಗಿನಲ್ಲಿ ಎಲ್ಲಾ ಧರ್ಮದವರು ಮನೆ ಕಳೆದುಕೊಂಡು ಅಶ್ರಯವೇ ಇಲ್ಲದಂತಾಗಿದೆ. ಈ ಸಂತ್ರಸ್ತರಿಗೆ ರಾಜ್ಯ ಸರ್ಕಾರ ನೆರವು ನೀಡುತ್ತಿದೆ.ಆದರೂ ಮಹಾಧರ್ಮಕ್ಷೇತ್ರದಿಂದಲೂ ಮನೆ ನಿರ್ಮಾಣ ಮಾಡಿಕೊಡಲು ನಿರ್ಧರಿಸಿದ್ದೇವೆ ಇದಕ್ಕಾಗಿ ಮಡಿಕೇರಿಯ ಹಟ್ಟಿಹೊಳೆ ಚರ್ಚ್ ಸಮೀಪ 4 ಎಕರೆ ಜಾಗ ಗುರುತಿಸಲಾಗಿದೆ. ಈ ಮಳೆಗಾಲ ಒಳಗೆ ಮನೆ ನಿರ್ಮಾಣದ ಗುರಿ ಇರಿಸಿದ್ದೇವೆ ಎಂದು ವಿವರಿಸಿದರು. ಎಂದು ವಿವರಿಸಿದರು.
ಮನೆ ನಿರ್ಮಾಣದ ನಿಧಿ ಸಂಗ್ರಹ ಜ.27ರಂದು ಬೆಂಗಳೂರಿನ ವಿಠಲ್ ಮಲ್ಯ ರೋಡ್ ನಲ್ಲಿರುವ ಸಂತ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಖ್ಯಾತ ಗಾಯಕ ಸೋನು ನಿಗಮ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.