ಉಡುಪಿ, ಜ 25(MSP):ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಮಹಾ ರಾಷ್ಟ್ರದ ಸಮುದ್ರದಾಳದಲ್ಲಿ ದುರಂತಕ್ಕೀಡಾಗಿ ರುವ ಬಲವಾದ ಶಂಕೆ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಗಡಿ ಸಮುದ್ರದ ಆಳದಲ್ಲಿ ಶೋಧ ನಡೆಸುತ್ತಿರುವ ನೌಕಪಡೆಯ ಹಡಗಿಗೆ 22 ಮೀಟರ್ ಉದ್ದದ ಬೋಟ್ನ ರೆಕ್ಕೆ ಹಾಗೂ ಕೆಲವು ಅವಶೇಷಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ, ಅವಶೇಷಗಳು ಸುವರ್ಣ ತ್ರಿಭುಜ ಬೋಟ್ನದ್ದು ಎಂಬ ಬಗ್ಗೆ ಖಚಿತವಾಗಿಲ್ಲ.
ಅವಶೇಷದ ೩ ಡಿ ಮ್ಯಾಪಿಂಗ್ ಕಾರ್ಯ ನಡೆಸಲು ಇನ್ನೊಂದು ಯುದ್ದ ನೌಕೆ ಐ ಎನ್ ಎಸ್ ಸಟ್ಲೆಜ್ ಆಗಮಿಸಿದೆ .ಐಎನ್ಎಸ್ ಕೊಚ್ಚಿ ಯುದ್ದ ನೌಕೆ ಸೋನಾರ್ ತಂತ್ರಜ್ಞಾನ ಮೂಲಕ 22 ಮೀಟರ್ ಉದ್ದದ ಬೋಟ್ ಅವಶೇಷ ಪತ್ತೆ ಮಾಡಿದೆ. ಭಾರಿ ಆಳದಲ್ಲಿರುವ ಕಾರಣ ಅವಶೇಷವನ್ನು ಮೇಲಕ್ಕೆತ್ತುವುದು ಅಥವಾ ಹತ್ತಿರ ಹೋಗುವುದು ಸಾಧ್ಯವಿಲ್ಲ.
ಹೆಚ್ಚಿನ ಶೋಧ ಕಾರ್ಯಕ್ಕೆ ಅತ್ಯಾಧಿನಿಕ ಸೌಲಭ್ಯಗಳನ್ನೊಳಗೊಮ್ಡ ಐಡ್ರಾಗ್ರಾಫಿಕ್ಸ್ ಸರ್ವೆ ಎಕ್ಸ್ ಪರ್ಟ್ ಸಟ್ಲೇಜ್ ನೌಕೆಯನ್ನು ತರಿಸಲಾಗಿದೆ. ಇದು ಸಮುದ್ರ ನೀರಿನಲ್ಲಿ ಸಮೀಕ್ಷೆ ನಡೆಸಿ ವರದಿ ವರದಿ ನೀಡುವುದರಲ್ಲಿ ಎತ್ತಿದ್ದ ಕೈ. ಈ ಹಿನ್ನಲೆಯಲ್ಲಿ ರಕ್ಷಣಾ ಸಚಿವಾಲಯ ಭಾರತೀಯ ನೌಕಾಪಡೆ ಇದನ್ನು ನಿಯೋಜಿಸಿದೆ. ಸೋನಾರ್ ತಂತ್ರಜ್ಞಾನ ಡಿಟೆಕ್ಟ್ ಮಾಡಿದಂತೆ ಕಂಪ್ಯೂಟರ್ ನಲ್ಲಿ ಗ್ರಾಫ್ ಸ್ಕೆಚ್ ಮಾಡಿ ಇದರ ಆಧಾರದಲ್ಲಿ ವಸ್ತುಗಳ ಇರುವಿಕೆ ಖಚಿತಪಡಿಸಲಾಗುತ್ತದೆ. ಅವಶೇಷ ೨೨ ಮೀ ಇದ್ದು , ಇದು ಸುವರ್ಣ ತ್ರಿಭುಜ ಬೋಟ್ ನದ್ದು ಎಂದು ಈಗಲೇ ಹೇಳಲಾಗದು. ಅವಘಡ ಸಂಭವಿದ ಸಂದರ್ಭ ತುದಿಭಾಗ ತುಂಡಾಗಿ ೨೨ ಮೀ ಆಗಿರಲೂ ಸಾಕು. ಮೂರ್ನಾಲ್ಕು ದಿನಗಳಲ್ಲಿ ತ್ರೀಡಿ ಮ್ಯಾಪಿಂಗ್ ಪೂರ್ಣಗೊಳ್ಳಲಿದ್ದು ಬಳಿಕವೇ ಸ್ಪಷ್ಟ ಚಿತ್ರಣ ಸಾಧ್ಯ
ಡಿ.15ರಂದು ಸಮುದ್ರದಲ್ಲಿ ಸಾಗುವಾಗ ನೌಕಾಪಡೆ ಹಡಗಿನ ತಳಭಾಗಕ್ಕೆ ಬೋಟ್ ಡಿಕ್ಕಿಯಾಗಿತ್ತು. ಇದರ ಆಧಾರದ ಮೇಲೆ ಸಮುದ್ರದಾಳದಲ್ಲಿ ಹಲವು ದಿನಗಳಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು. ಈಗ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.