ಮಂಗಳೂರು, ಜು 20 (DaijiworldNews/HR): ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ ಮೆಂಟ್ ಇದರ 2021-22ರ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮ 'ಸಿಂಫೋನಿ' ನಗರದ ಡಾನ್ ಬಾಸ್ಕೋ ಸಭಾಂಗಣದಲ್ಲಿನಡೆಯಿತು.
ಈ ಸಮಾರಂಭದ ಮುಖ್ಯ ಅತಿಥಿಯಾದ ಆಗಮಿಸಿ ದನಟ, ತುಳುನಾಡ ಚಕ್ರವರ್ತಿ ಅರ್ಜುನ್ ಕಾಪಿಕಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು "ಶೈಕ್ಷಣಿಕ ಬದುಕಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತದೆ ಹಾಗೂ ಅವರಬದುಕಿಗೆಪೂರಕವಾಗುತ್ತವೆ" ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಲೆಕ್ಕಪರಿಶೋಧಕ ಗೋಪಾಲಕೃಷ್ಣ ಭಟ್, ಕಾಲೇಜಿನ ಶೈಕ್ಷಣಿಕ ಆಡಳಿತ ಸಲಹೆಗಾರ ಡಾ.ನಾರಾಯಣ್ ಕಾಯರ್ ಕಟ್ಟೆ, 'ಅಬತರ' ತುಳು ಚಿತ್ರ ತಂಡ ಹಾಗೂ ಪ್ರಾಂಶುಪಾಲರಾದ ಪ್ರೊ.ಗಿರೀಶ್ ಮಾಡ್ಲ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಸುಪ್ರಭಾ, ಸಾಂಸ್ಕೃತಿಕ ಸಂಘದ ಸಂಯೋಜನಾಧಿಕಾರಿಗಳಾದ ಪ್ರೊ.ಮರೀನಾ ಸೀಮಾ ಸಿಕ್ವೇರಾ, ಪ್ರೊ.ರೂಪಾ ಹಾಗೂ ಅಂತಿಮ ಬಿ.ಕಾಂ ವಿದ್ಯಾರ್ಥಿಗಳಾದ ವಿಧಾತ್, ನರೇನ್, ಶಿವಾಚಂದ್ ಎಸ್.ನಾಯಕ್, ಪ್ರೀತಿ ಜೆ.ಪಿ. ಮುಂತಾದವರು ವೇದಿಕೆಯಲ್ಲಿಉಪಸ್ಥಿತರಿದ್ದರು.