ಬಂಟ್ವಾಳ, ಜು 20 (DaijiworldNews/HR): ವೇಗವಾಗಿ ಬಂದ ಕಾರೊಂದು ಪಾಣೆಮಂಗಳೂರು ಹೆದ್ದಾರಿ ಬಳಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜನರೇಟರ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಕುಶಾಂತ್ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಕುಶಾಂತ್ ಉಡುಪಿಯಿಂದ ಹೊರಟಿದ್ದು ಮಧ್ಯರಾತ್ರಿ 2:30ರ ಸುಮಾರಿಗೆ ಪಾಣೆಮಂಗಳೂರು ತಲುಪುತ್ತಿದ್ದಾಗ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ.
ಇನ್ನು ಕ್ರೇನ್ ಸಹಾಯದಿಂದ ಕಾರನ್ನು ಹಳ್ಳದಿಂದ ಹೊರ ತೆಗೆಯಲಾಯಿತು.