ಮಂಗಳೂರು, ಜ 23(SM): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಜನರೂ ಈ ಬಗ್ಗೆ ಆತಂಕ ಪಡುವಂತಹ ಅಗತ್ಯ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಮನುಷ್ಯನಿಂದ ಮನುಷ್ಯನಿಗೆ ಈ ಖಾಯಿಲೆ ಹರಡುವುದಿಲ್ಲ. ಮುಖ್ಯವಾಗಿ ಮಂಗನಲ್ಲಿ ಆಗುವ ರೋಗವಾಗಿದ್ದು, ಮಂಗ ಸತ್ತಾಗ ಅದರ ದೇಹದಿಂದ ಹೊರ ನಡೆಯುವ ಉಣ್ಣೆ(ಉಣುಗು)ವಿನಿಂದಾಗಿ ರೋಗಹರಡಲು ಕಾರಣವಾಗುತ್ತಿದೆ.
ಜನತೆ ಆದಷ್ಟು ಎಚ್ಚರಿಕೆಯಿಂದ ಇದ್ದು ರೋಗದ ಲಕ್ಷಣಗಳು ಕಂಡು ಬಂದರೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಆದರೆ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದರು