ನವದೆಹಲಿ,ಜ 23(MSP): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಗೆಗಳು ಗರಿಕೆದರತೊಡಗಿದ್ದು, ಕಾಂಗ್ರೆಸ್ ತನ್ನ ಒಂದೊಂದೆ ದಾಳಗಳನ್ನು ಪ್ರಯೋಗಿಸತೊಡಗಿದೆ. ಈವರೆಗೆ ತೆರೆಮರೆಯ ರಾಜಕೀಯ ನಡೆಸುತ್ತಿದ್ದ ಗಾಂಧಿ ಕುಟುಂಬದ ಪ್ರಿಯಾಂಕಾ ಗಾಂಧಿ ಸಕ್ರೀಯ ರಾಜಕೀಯಕ್ಕೆ ಎಂಟ್ರಿ ಕೊಡೋದು ಬಹುತೇಕ ಖಚಿತವಾಗಿದೆ.
ಸೋನಿಯಾ ಗಾಂಧಿ ಬಳಿಕ ಎಐಸಿಸಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದ ರಾಹುಲ್ ಗಾಂಧಿ ಅವರು ಇದೀಗ ಪ್ರಿಯಾಂಕಾ ಗಾಂಧಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ, ಉತ್ತರಪ್ರದೇಶದ ಹೊಣೆಗಾರಿಕೆ ವಹಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳ ವರದಿ ತಿಳಿಸಿದೆ.
ಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ಮುಂಬರುವ ತಿಂಗಳಲ್ಲಿ ಅಂದರೆ ಫೆಬ್ರವರಿ ಮೊದಲ ವಾರದಲ್ಲಿ ಅಧಿಕೃತವಾಗಿ ’ಅಧಿಕಾರ ’ ಸ್ವೀಕರಿಸುವ ಸಾಧ್ಯತೆ ಇದೆ. ಇದಲ್ಲದೇ ಈ ಹಿಂದೆ ಪ್ರಿಯಾಂಕ ತಾಯಿ ಸೋನಿಯಾ ಗಾಂಧಿ ಸ್ವರ್ಧಿಸುತ್ತಿದ್ದ ಲೋಕಸಭಾ ಕ್ಷೇತ್ರವಾದ ರಾಯ್ ಬರೇಲಿಯಿಂದ ಪ್ರಿಯಂಕಾ ಗಾಂಧಿ ಸ್ವರ್ಧಿಸುವ ಸಾಧ್ಯತೆ ಇದೆ.