ಮಂಗಳೂರು, ಜು 19 (DaijiworldNews/MS): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೃಹ ಬಳಕೆಯ ನೀರಿನ ದರ ಪರಿಷ್ಕರಣೆಯ ಬಗ್ಗೆ ಪಾಲಿಕೆ ಕಳುಹಿಸಿದ ಪ್ರಸ್ತಾಪನೆಯನ್ನು ರಾಜ್ಯ ಸರ್ಕಾರ ಷರತ್ತುಗಳ ಅನ್ವಯ ಸೋಮವಾರ ಅನುಮೋದನೆ ಮಾಡಿದೆ.
"ಸರಕಾರದ ಮಾನದಂಡದಂತೆ ವಿಧಿಸಲಾಗಿರುವ ಕುಡಿಯುವ ನೀರಿನ ದರವನ್ನು ಪರಿಷ್ಕರಿಸುವಂತೆ ಈ ಹಿಂದೆ ಸರಕಾರಕ್ಕೆ ಸಲ್ಲಿಸಲಾದ ಮೊದಲ ಪ್ರಸ್ತಾವನೆಯು ತಿರಸ್ಕಾರಗೊಂಡಿತ್ತು. ಆದರೆ ನೀರಿನ ದರದ ಬಗ್ಗೆ ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಸರಕಾರ ಇದೀಗ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದೆ "ಎಂದು ಮೇಯರ್ ಪ್ರೇಮನಂದ ಶೆಟ್ಟಿ ತಿಳಿಸಿದ್ದಾರೆ