ಕುಂದಾಪುರ, ಜು 17 (DaijiworldNews/HR): ಬೈಕ್ ಸ್ಕಿಡ್ ಆಗಿ ಬಿದ್ದು ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಂಬದಕೋಣೆ ಸಮೀಪದ ಸೇತುವೆ ಬಳಿ ಭಾನುವಾರ ಸಂಭವಿಸಿದೆ.
ಮೃತರನ್ನು ಆಂಧ್ರ ಪ್ರದೇಶ ಮೂಲದ ಆದಿತ್ಯ ರೆಡ್ಡಿ (18), ಹಾಗೂ ತರುಣ್ ಕುಮಾರ್ ರೆಡ್ಡಿ (19) ಎಂದು ಗುರುತಿಸಲಾಗಿದೆ.
ಇಬ್ಬರು ಉಡುಪಿ ಜಿಲ್ಲೆಯ ಕಾಲೇಜೊವೊಂದರ ವಿದ್ಯಾರ್ಥಿಗಳಾಗಿದ್ದು, ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.