ಸುಳ್ಯ, , ಜು 17 (DaijiworldNews/DB): ಟಯರ್ ಅಂಗಡಿಯೊಂದಕ್ಕೆ ತಡರಾತ್ರಿ ಬೆಂಕಿ ತಗುಲಿ ಭಾರೀ ನಷ್ಟ ಉಂಟಾಗಿರುವ ಘಟನೆ ಸಂಪಾಜೆ ಹ್ರಾಮದ ಕಲ್ಲುಗುಂಡಿಯಲ್ಲಿ ನಡೆದಿದೆ.
ಇಲ್ಲಿನ ಕೂಲಿಶೆಡ್ನಲ್ಲಿರುವ ಟಯರ್ ಅಂಗಡಿಗೆ ಬೆಂಕಿ ತಗುಲಿದೆ. ಟಯರ್, ಟ್ಯೂಬ್ ರಿಪೇರಿ ಮತ್ತು ಮಾರಾಟದ ಅಂಗಡಿ ಇದಾಗಿದೆ. ಬೆಂಕಿ ತಗುಲಿದ ಪರಿಣಾಮ ಹತ್ತಿರದ ಗೂಡಂಗಡಿ, ಸೈಕಲ್ ರಿಪೇರಿ ಅಂಗಡಿ, ಹೊಟೇಲ್ಗೂ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದ ಕೂಡಲೇ ಸುಳ್ಯದ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು.