ಮಂಗಳೂರು, ಜು 17 (DaijiworldNews/DB): ಶಿವಭಾಗ್ನಲ್ಲಿರುವ ಚೈಲ್ಡ್ಲೈನ್ನಿಂದ ಬಾಲಕಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ. ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನವದೆಹಲಿ ಮೂಲದ ಇಂಚರಾ (15) ನಾಪತ್ತೆಯಾದ ಬಾಲಕಿ. ಅಣ್ಣನನ್ನು ಹುಡುಕಿಕೊಂಡು ಕೆಲ ದಿನಗಳ ಹಿಂದಷ್ಟೇ ಆಕೆ ದೆಹಲಿಯಿಂದ ಮಂಗಳೂರಿಗೆ ಬಂದಿದ್ದಳು. ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ತಿರುಗಾಡುತ್ತಿದ್ದ ಆಕೆಯನ್ನು ರೈಲ್ವೇ ಪೊಲೀಸರು ವಿಚಾರಿಸಿದಾಗ ಅಸ್ಪಷ್ಟವಾಗಿ ಮಾತನಾಡುತ್ತಿದ್ದಳು. ಬಳಿಕ ಆಕೆಯನ್ನು ಚೈಲ್ಡ್ಲೈನ್ಗೆ ಕರೆ ತಂದು ಬಿಡಲಾಗಿತ್ತು.
ಆದರೆ ಶನಿವಾರ ಮಧ್ಯಾಹ್ನ ಚೈಲ್ಡ್ಲೈನ್ ಕಂಪೌಂಡ್ನಿಂದ ಹಾರಿ ಬಾಲಕಿ ನಾಪತ್ತೆಯಾಗಿದ್ದಾಳೆಎನ್ನಲಾಗಿದೆ.