ಉಡುಪಿ, ಜು 16 (DaijiworldNews/MS): ಜೂನ್ 2022 ನೇ ಸಾಲಿನಲ್ಲಿ ನವದೆಹಲಿಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಮತ್ತು ತ್ರಿಶಾ ಕ್ಲಾಸಸ್ ನ ಆರು ಮಂದಿ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಫಿಯೋನಾ ಮೋನಿಸ್, ಮಾರ್ವೆಲ್ ಕ್ರಿಸ್ಟನ್ ಡಿಸೋಜಾ, ಧನಂಜಯ ಪಿ. ಶೇಟ್, ಶ್ರವಣ್ ಎಸ್. ಕಾಮತ್, ರಚಿತ್ ಆರ್ ಶೆಟ್ಟಿ, ಮತ್ತು ಅಶ್ವನ್ ಅಹಮ್ಮದ್ ಅವರು ಉತ್ತೀರ್ಣಗೊಂಡಿದ್ದಾರೆ.
ಫಿ಼ಯೋನಾ ಮೋನಿಸ್ ಮತ್ತು ಮಾರ್ವೆಲ್ ಕ್ರಿಸ್ಟನ್ ಡಿಸೋಜಾ ಅವರು ಮಂಗಳೂರಿನ ಲೆಕ್ಕಪರಿಶೋಧಕರಾದ ಶ್ರೀರಾಮುಲು ನಾಯ್ಡು ಮತ್ತು ಕಂಪೆನಿಯಲ್ಲಿ ಆರ್ಟಿಕಲ್ ಶಿಪ್ ನಡೆಸುತ್ತಿದ್ದು 'ಸಿಎ'ಯ ಎರಡು ಹಂತದ ತರಬೇತಿಯನ್ನು ತ್ರಿಶಾ ಕ್ಲಾಸಸ್ನಲ್ಲಿ ಹಾಗೂ ಅಂತಿಮ ಹಂತದ ತರಬೇತಿಯನ್ನು ಆನ್ ಲೈನ್ ಮೂಲಕ ಪಡೆದಿರುತ್ತಾರೆ. ಉಡುಪಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೂರೈಸಿರುತ್ತಾರೆ.
ಧನಂಜಯ ಪಿ. ಶೇಟ್ ಅವರು ಮಂಗಳೂರಿನ ಬಿ.ಬಿ ಶಾನೋಭಾಗ್ ಮತ್ತು ಕಂಪನಿ, ಶ್ರವಣ್ ಎಸ್ ನಾಯಕ್ ಅವರು ಮಂಗಳೂರಿನ ಬಿ.ಶಿವಾನಂದಪೈ ಮತ್ತು ಕಂಪೆನಿಯಲ್ಲಿ, ರಚಿತ್ ಆರ್ ಶೆಟ್ಟಿ ಅವರು ಉಡುಪಿಯ ದೇವ್ ಆನಂದ್ ಮತ್ತು ಕಂಪನಿಯಲ್ಲಿ, ಕುಂದಾಪುರದ ಅಶ್ವನ್ ಅಹಮ್ಮದ್ ಅವರು ಎನ್ ಶಾಂತರಾಮ್ ನಾಯಕ್ ಮತ್ತು ಕಂಪನಿಯಲ್ಲಿ ಆರ್ಟಿಕಲ್ ಶಿಪ್ ಅನ್ನು ಪೂರ್ಣಗೊಳಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ತ್ರಿಶಾ ಕ್ಲಾಸಸ್ ನಲ್ಲಿ ಸಿಎ ಯ ಎರಡು ಹಂತದ ತರಬೇತಿಯನ್ನು ಪಡೆದಿದ್ದರು.