ಮಂಗಳೂರು, ಜು 16 (DaijiworldNews/MS): ನಗರಕ್ಕೆ ತುಂಬೆ ಜಲಾಶಯದಿಂದ ನೀರು ಪೂರೈಸುವ 900 ಮಿ.ಮೀ ವ್ಯಾಸದ ಮುಖ್ಯ ಕೊಳವೆಯಲ್ಲಿ ಸೋರಿಕೆ ಉಂತಾಗಿದ್ದು ಇದನ್ನು ಕೂಳೂರು ಹಾಗೂ ಕೊಟ್ಟಾರಚೌಕಿ ಬಳಿ ದುರಸ್ತಿಪಡಿಸಬೇಕಿರುವುದರಿಂದ ನಗರದ ಕೆಲವು ಪ್ರದೇಶಗಳಲ್ಲಿ ಇದೇ 17ರಂದು ಬೆಳಿಗ್ಗೆ 6ರಿಂದ 18ರಂದು ಬೆಳಿಗ್ಗೆ 6ರವರೆಗೆ ನೀರು ಪೂರೈಕೆ ವ್ಯತ್ಯಯವಾಗಲಿದೆ.
ನೀರು ಪೂರೈಕೆಯು ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಪ್ರದೇಶಗಳಲ್ಲಿ ಸಂಪೂರ್ಣ ಹಾಗೂ ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಪ್ರದೇಶಗಳಲ್ಲಿ ಭಾಗಶಃ ವ್ಯತ್ಯಯವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.