ಕಾಸರಗೋಡು, ಜು 15 (DaijiworldNews/SM): ಕಾಡು ಹಂದಿಯ ಹಿಂಡು ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಪ್ರಯಾಣಿಕ ಗಾಯಗೊಂಡ ಘಟನೆ ಶುಕ್ರವಾರ ಬೋವಿಕ್ಕಾನ ಎಂಟನೇ ಮೈಲ್ ನಲ್ಲಿ ನಡೆದಿದೆ.
ಸುಳ್ಯದಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕಾರು ಬೋವಿಕ್ಕಾನಕ್ಕೆ ತಲಪಿದಾಗ ಕಾಡು ಹಂದಿಗಳ ಹಿಂಡು ರಸ್ತೆಗಡ್ಡವಾಗಿ ಓಡಿದ್ದರಿಂದ ಈ ಘಟನೆ ನಡೆದಿದೆ. ಕಾಡು ಹಂದಿಗಳ ಹಿಂಡು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಗಾಯಾಳುವನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿದೆ.