ಕುಂದಾಪುರ, ಜು 14 (DaijiworldNews/HR): ತಾಲೂಕಿನ ಗುಲ್ವಾಡಿ ಗ್ರಾಮ ಶೆಟ್ರಕಟ್ಟೆಯಿಂದ ಬಡಾಮನೆ ಬಾಗಳಹಾಡಿ ಚೋರಬೆಟ್ಟು ಪ್ರದೇಶಗಳಿಗೆ ಹೋಗುವ ರಸ್ತೆಯನ್ನು ಒಬ್ಬ ಖಾಸಗಿ ವ್ಯಕ್ತಿಯು ಅತಿಕ್ರಮಣ ಮಾಡಿಕೊಂಡಿದ್ದು ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಎರಡೂವರೆ ವರ್ಷಗಳ ಹಿಂದೆ ದೂರನ್ನು ಸಲ್ಲಿಸಿದ್ದು ನ್ಯಾಯಕ್ಕಾಗಿ ಅಲ್ಲಿನ ಗ್ರಾಮಸ್ಥರು ಹೋರಾಟ ಮಾಡುತ್ತಲೇ ಬಂದಿದ್ದು, ಈ ಬಗ್ಗೆ ವಿಧಾನ ಪರಿಷತ್ ಅರ್ಜಿ ಸಮಿತಿಗೆ ದೂರನ್ನು ಕೊಟ್ಟು ಅದರ ಪ್ರತಿಫಲವಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತಾಯಿತು.
ಕುಂದಾಪುರದ ತಹಶಿಲ್ದಾರರಾದ ಕಿರಣ್ ಗೋರಯ್ಯ ಹಾಗೂ ಕಂದಾಯ ನಿರೀಕ್ಷರಾದ ರಾಘವೇಂದ್ರ ಏರಡೆರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಸತ್ಯ ತಿಳಿದು ಜೂನ್ 2 ರಂದು ಒತ್ತುವರಿ ಜಾಗವನ್ನು ತೆರವುಗೊಳಿಸಲು ಆದೇಶ ಮಾಡಿರುತ್ತಾರೆ. ಜೂನ್ 28 ರಂದು ಒತ್ತವರಿ ಸ್ಥಳದ ತೆರವಿಗೆ ದಿನ ನಿಗದಿ ಮಾಡಿದ್ದು ಆದೇಶದಂತೆ ಕಂದಾಯ ನಿರೀಕ್ಷರು ಗ್ರಾಮ ಲೆಕ್ಕಿಗರು ಹಾಗು ಪಂಚಾಯತ್ ಅಧಿಕಾರಿಗಳು ಹಾಗು ಪಂಚಾಯತ್ ಪ್ರತಿನಿಧಿಗಳು ತೆರವು ಕಾರ್ಯಾಚರಣೆಗೆ ಬಂದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಆರ್ ಐ ಅವರು ಸಂಪೂರ್ಣವಾಗಿ ರಸ್ತೆ ತೆರವುಗೊಳಿಸುವ ಬದಲು ಜಾಗ ಖಾಸಗಿ ವ್ಯಕ್ತಿಯೊಬ್ಬನ ಬೆಂಬಲಕ್ಕೆ ನಿಂತು ರಸ್ತೆ ತೆರವು ಮಾಡುವ ನೆಪದಲ್ಲಿ ಅದಾಗಲೇ ಇದ್ದ ಹಳೆಯ ಕಾಲು ದಾರಿಯನ್ನು ಮುಚ್ಚಿಸಿದ್ದು, ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಆಗುವಂತೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇನ್ನು ಈಗಿನ ಪರಿಸ್ಥಿತಿಯಿಂದ ಏಳು ಪರಿಶಿಷ್ಟ ಕುಟುಂಬ ಸೇರಿ ಸುಮಾರು ಮೊವತ್ತು ಮನೆಯವರಿಗೆ ಸಂಚರಿಸಲು ಅನ್ಯ ಮಾರ್ಗವೇ ಇಲ್ಲವಾಗಿದೆ. ಕೃಷಿಗೆ ಪೂರಕ ಯಂತ್ರಗಳನ್ನು ತರಲು ಅಸಾಧ್ಯವಾಗಿ ಕೃಷಿ ಭೂಮಿಯನ್ನು ಹಡುವಲು ಬಿಡುವಂತಾಗಿದೆ. ಯಾರದ್ದೊ ಒತ್ತಡಕ್ಕೆ ಮಣಿದು ಅರ್ಧಕ್ಕೆ ತೆರವು ಕಾರ್ಯ ನಿಲ್ಲಿಸಿರುವುದರಿಂದ ಮರಗಳು ಗುಲ್ವಾಡಿ ಗ್ರಾಮದ ಬಸವ ಪೂಜಾರಿಯವರ ಮನೆಯ ಮೇಲೆ ಬೀಳುವ ಸ್ಥಿತಿಯಲ್ಲಿ ಇವೆ. ಒಂದು ಮನೆಯಲ್ಲಿ ಗರ್ಬಿಣಿ ಮಹಿಳೆ ಇದ್ದು ಮನೆಯವರು ಭಯದಿಂದ ವಾಸಿಸುವಂತೆ ಆಗಿದೆ. ಕಂದಾಯ ನೀರಿಕ್ಷಕರು ವಿಷಯ ಗಮನಕ್ಕೆ ಬಂದಿದ್ದರೂ ಆದೇಶ ಪಾಲನೆಗೆ ಮುಂದಾಗುತ್ತಿಲ್ಲವಂತೆ. ಈ ಬಗ್ಗೆ ತಹಶೀಲ್ದಾರ್ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ತೆಗದುಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ವಿಷಯದ ಬಗ್ಗೆ ತಹಶೀಲ್ದಾರ ಕಿರಣ್ ಗೋರಯ್ಯ ನವರು ದೈಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿ, ಈ ರಸ್ತೆ ವಿವಾದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಗುಲ್ವಾಡಿ ಗ್ರಾಮದಳ್ಳಿ ಒತ್ತುವರಿ ಕಾರ್ಯಾಚರಣೆ ಸ್ಥಗಿತ ಗೊಳಿಸಿದ ಬಗ್ಗೆ ನನಗೆ ಗಮನಕ್ಕೆ ಬಂದಿರುತ್ತದೆ. ಒತ್ತುವರಿ ತೆರವು ಮಾಡುವಾಗ ಗ್ರಾಮಸ್ಥರು ರಸ್ತೆ ಕಿರಿದಾಗಿದ್ದು ಜಾಗ ಕಡಿಮೆ ಇರುವ ಬಗ್ಗೆ ಮತ್ತೆ ಆಕ್ಷೇಪ ವೆತ್ತಿದ್ದರು. ಈ ರಸ್ತೆಗೆ ಆಕ್ಷೇಪವೆತ್ತಿದ ಮನೆಯವರು ಮತ್ತು ಆ ಪರಿಶಿಷ್ಟ ಜಾತಿ ಮನೆಯವರೊಂದಿಗೆ ಮಾತುಕತೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕೆಲವೇ ದಿನದಲ್ಲಿ ಕಾನೂನಾತ್ಮಕವಾಗಿ ಕ್ರಮವನ್ನು ತೆಗದು ಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.