ಬ್ರಹ್ಮಾವರ, ಜು 14 (DaijiworldNews/MS): ಆಟವಾಡಲೆಂದು ತೆರಳಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಬ್ರಹ್ಮಾವರದ ಬಳಿ ಜು. 13 ರ ಬುಧವಾರ ನಡೆದಿದೆ.
ಮೃತ ಬಾಲಕನನ್ನು ನೋರ್ಮನ್ ಮತ್ತು ಸಿಲ್ವಿಯ ಎಂಬವರ 5 ವರ್ಷದ ಪುತ್ರ ಲಾರೆನ್ ಲೂವಿಸ್ ಎಂದು ಗುರುತಿಸಲಾಗಿದೆ.
ಬ್ರಹ್ಮಾವರ ತಾಲೂಕು ಉಪ್ಪೂರು ತೆಂಕಬೆಟ್ಟು ಬಳಿ ಈ ಘಟನೆ ನಡೆದಿದ್ದು, ಇವರು ಕುವೈಟ್ ನಲ್ಲಿ ವಾಸವಾಗಿದ್ದು ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು.
ಮನೆಯ ಪಕ್ಕ ಆಟವಾಡುತ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು ಮಗು ದಾರುಣವಾಗಿ ಸಾವನ್ನಪ್ಪಿದೆ.