ಉಪ್ಪಿನಂಗಡಿ, ಜು 14 (DaijiworldNews/DB): ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದೆ.
ಹಾಸನದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಲಾರಿಯು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕಕ್ಕೆ ಉರುಳಿದೆ. ಬಳಿಕ ರಸ್ತೆ ಬದಿಯಲ್ಲಿರುವ ತೋಡಿಗೆ ಮಗುಚಿ ಬಿದ್ದಿದೆ.
ಘಟನೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಳೆಗಾಲವಾದ್ದರಿಂದ ತೋಡಿನಲ್ಲಿ ನೀರು ಹೆಚ್ಚಿದ್ದು, ರಭಸವಾಗಿ ಹರಿಯುತ್ತಿತ್ತು. ಇದರಿಂದ ಲಾರಿಯ ಅರ್ಧ ಭಾಗ ತೋಡಿನ ನೀರಿನಲ್ಲಿ ಮುಳುಗಿದೆ.