ಉಡುಪಿ, ಜು 13(DaijiworldNews/MS): ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದು, ಕಾಂಗ್ರೆಸ್ ನ ಸಂಸ್ಕೃತಿ ಹೇಗೋ ಹಾಗೆಯೇ ಸಿಂಹ ಕಾಣುತ್ತದೆ ಎಂದು ಹೊಸ ಸಂಸತ್ ಭವನದ ಮೇಲಿನ ಲಾಂಛನದ ವಿವಾದದ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಜು.13 ರಂದು ಉಡುಪಿಯಲ್ಲಿ ಟಾಂಗ್ ನೀಡಿದ್ದಾರೆ.
ಸಂಸತ್ ಮುಂದಿನ ರಾಷ್ಟ್ರ ಲಾಂಛನದ ಬಗ್ಗೆ ಚರ್ಚೆಯಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಈಗಾಗಲೇ ಹೊಸಲಾಂಛನ ಬಗ್ಗೆ ಸ್ಪಷ್ಟತೆ ಕೊಡಲಾಗಿದೆ. ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ.ಅದೇ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ. ಲಾಂಛನವು ನಾವು ನೋಡುವ ದೃಷ್ಟಿಯಲ್ಲಿದೆ. ಅದುವ್ಯಾಗ್ರವಾಗಿದೆ, ಉಗ್ರವಾಗಿದೆ ಎಂಬುವುದು ನಮ್ಮ ದೃಷ್ಟಿಕೋನ ಸೂಚಿಸುತ್ತದೆ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಲಾಂಛನ ವಿಚಾರದಲ್ಲೂ ವಿರೋಧ ಪಕ್ಷ ಮೊಸರಿನಲ್ಲಿ ಕಲ್ಲು ಹುಡುಕುವ ಯತ್ನವನ್ನು ಮಾಡುತ್ತಿದೆ.ಸಾರನಾಥ ಮಾದರಿಯನ್ನು ಯಥಾವತ್ತು ಮಾಡಲಾಗಿದ್ದು, ಆ ಲಾಂಛನವನ್ನು ಕಾಂಗ್ರೆಸ್ ನೋಡುವ ದೃಷ್ಟಿಯೇ ಬೇರೆ, ನಾವು ನೋಡುವ ದೃಷ್ಟಿಯೇ ಬೇರೆಯಾಗಿದೆ. ನಮ್ಮಲ್ಲಿ ಕ್ರಿಯಾಶೀಲ, ಆಕ್ಟಿವ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಇದ್ದು ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದೇ ನಮ್ಮ ಸಿಂಹವಾಗಿದೆ.
ಆದರೆ ಕಾಂಗ್ರೆಸ್ ಇದರಲ್ಲೂ ರಾಜಕೀಯ ಹುಡುಕುತ್ತಿದೆ. ಕಾಂಗ್ರೆಸ್ ಯಾವಗಾಲೂ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದಾರೆ.ಕಾಂಗ್ರೆಸ್ ಸಂಸ್ಕೃತಿ ಹೇಗೋ ಈ ಸಿಂಹ ಹಾಗೆಯೇ ಕಾಣುತ್ತದೆ ಎಂದು ಲೇವಡಿ ಮಾಡಿದ್ದಾರೆ