ಕಾಸರಗೋಡು, ಜು 13 (DaijiworldNews/DB): ಇಲ್ಲಿನ ಒಡೆಂಚಾಲ್ ಜಿಲ್ಲೆಯ ಜನರು ಪ್ರಾಕೃತಿಕ ಅದ್ಬುತವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಒಂದೆಡೆ ಇಂಗುವ ನೀರು ಕಿಲೋಮೀಟರ್ ಗಟ್ಟಲೆ ದೂರದಲ್ಲಿ ಮೇಲೆದ್ದು ಬರುವ ವಿಸ್ಮಯಕ್ಕೆ ಚಕಿತಗೊಂಡಿದ್ದಾರೆ.
ಹೌದು. ಒಡೆಂಚಾಲ್ ಸಮೀಪ ತೋಡೊಂದರಲ್ಲಿ ಅತಿ ರಭಸವಾಗಿ ಹರಿದು ಬರುವ ನೀರು ಇದ್ದಕ್ಕಿದ್ದಂತೆ ಭೂಮಿಯೊಳಗೆ ಇಂಗಿ ಹೋಗುತ್ತದೆ. ಬಳಿಕ ಆ ನೀರು ಎಲ್ಲಿಯೂ ಮೇಲೇಳುವುದಾಗಲೀ, ನೀರಿನ ಸಣ್ಣ ಕಣವೂ ಆ ಪ್ರದೇಶದಲ್ಲಿ ಕಾಣಸಿಗುವುದಿಲ್ಲ. ಆದರೆ ಸುಮಾರು ಕಿಲೋಮೀಟರ್ನಷ್ಟು ದೂರದಲ್ಲಿ ಇನ್ನೊಬ್ಬರ ತೋಟದಲ್ಲಿ ಆ ನೀರು ಮೇಲೆದ್ದು ಬರುತ್ತದೆ.
ಒಡೆಂಚಾಲ್ ಸಮೀಪ ತೋಡಿನಲ್ಲಿ ಬರುತ್ತಿದ್ದ ಅತಿರಭಸವಾದ ನೀರು ಇದ್ದಕ್ಕಿದ್ದ ಹಾಗೆ ಭೂಮಿ ಒಳಗೆ ಇಂಗಿ ಹೋಗುತ್ತದೆ. ಇದನ್ನು ನೋಡಿದಾಗ ಭೂಮಿಯೇ ನೀರನ್ನು ತನ್ನತ್ತ ಸೆಳೆದುಕೊಳ್ಳುವಂತೆ ಭಾಸವಾಗುತ್ತದೆ. ಆ ನೀರು ಭೂಮಿಯೊಳಗೆ ಇಂಗಿ ಹೋಗಿದೆಯೆಂದೇ ಭಾಸವಾಗುತ್ತದೆ. ಹೀಗಾಗಿ ಈ ಇಂಗಿದ ನೀರು ನಿಜವಾಗಲೂ ಭೂಮಿ ಸೇರುತ್ತದೆಯೇ ಅಥವಾ ಬೇರೆಲ್ಲಾದರೂ ಮೇಲೇಳುತ್ತದೆಯೇ ಎಂಬ ಕುತೂಹಲದಿಂದ ಸ್ಥಳೀಯರು ಶೋಧಿಸತೊಡಗಿದ್ದಾರೆ. ಈ ವೇಳೆ ಇಂಗಿದ ಅದೇ ನೀರು ಕಿಲೋಮೀಟರ್ ಅಷ್ಟು ದೂರದಲ್ಲಿ ಇನ್ನೊಬ್ಬರ ತೋಟದಲ್ಲಿ ಮೇಲೆದ್ದು ಬರುವುದು ಗೊತ್ತಾಗಿದೆ. ಸದ್ಯ ಪ್ರಕೃತಿಯ ಈ ವಿಸ್ಮಯವು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಜನ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಒಡೆಂಚಾಲ್ಗೆ ಬರುತ್ತಿದ್ದಾರೆ.