ಮಂಗಳೂರು, ಜ 21(SM): ಒಂದಲ್ಲ ಒಂದು ವಿಶೇಷತೆಗಳ ಮೂಲಕ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ಗಾಣಿಗ ಯಾನೆ ಸಪಲಿಗಾಸ್ ಪರಿವಾರ್ ಸಂಘಟನೆ ವತಿಯಿಂದ ನಡೆಯುವ ಗಾಣಿಗ ಸಂಗಮದ ನಾಲ್ಕನೇ ವರ್ಷದ ಗಾಣಿಗ ಸಂಗಮ ೨೦೧೯ ಕೂಡಾ ವಿಶೇಷತೆಯಿಂದಲೇ ಕೂಡಿತ್ತು. ಮುಂಜಾನೆ ನಡೆದ ಗೋಪೂಜೆ ಬಳಿಕ ಸಭಾ ಕಾರ್ಯಕ್ರಮದಲ್ಲಿ ಪುಟ್ಟ ಕರುವೊಂದನ್ನು ಸಂಘಟನೆ ಸದಸ್ಯರು ದತ್ತು ಸ್ವೀಕಾರದ ಮೂಲಕ ವಿಭಿನ್ನ ರೀತಿಯಲ್ಲಿ ಗಾಣಿಗ ಸಂಗಮ 2019ಕ್ಕೆ ಮಂಜೇಶ್ವರ ಕೀರ್ತೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬಿ ಎಮ್ ಕಮಲಾಕ್ಷ ಚಾಲನೆ ನೀಡಿದರು.
ಉದ್ಘಾಟನೆಯನ್ನು ಉದ್ಯಮಿ ಸುಂದರ್ ಸಾಲ್ಯಾನ್ ನೆರವೇರಿಸಿದರು. ಹರ್ಷ ಫೈನಾನ್ಸ್ನ ಹರೀಶ್ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್, ಸಂತೋಷ್ಕುಮಾರ್ ತುಪ್ಪೆಕಲ್ಲು, ಮೀನುಗಾರ ಸಂಘಟನೆ ಮುಖಂಡ ಯಶ್ಪಾಲ್ ಸುವರ್ಣ, ಅತಿಥಿಗಳಾಗಿ ಪ್ರೇಮ್ಸಾಲ್ಯಾನ್ ಬಿಜೈ, ಎಂ ದೇವಪ್ಪ ಸಫಲಿಗ, ನಾಗರಾಜ್, ಮಾಧವ ಮಾವೆ, ದಿಲೀಪ್ ರಾಜ್, ಶ್ರೀಶಾಂತ್, ಸಂಧ್ಯಾ ವೆಂಕಟೇಶ್, ಚೇತನ್ ಸುಶೀಲ್, ಪ್ರಶಾಂತ್ ಜಿ ಪೈ, ಭಾರತೀಯ ಭೂಸೇನೆಯ ನಿವೃತ್ತ ಸುಬೇದಾರ್ ಮೇಜರ್ ದಾಮೋದರ ಎಸ್, ಕರಾಟೆಪಟು ರಂಜಿತ್ ಎಸ್ ಮುಂಡ್ಕೂರು, ಡ್ಯಾನ್ಸ್ ಕೊರಿಯೋಗ್ರಫರ್ ಗೌತಮ್ ಗಾಣಿಗ, ಕಾಮಿಡಿ ಕಿಲಾಡಿಗಳು ರನ್ನರ್ ಅಪ್ 2018ರ ಸೂರಜ್ ಕುಮಾರ್, ಖ್ಯಾತ ಸರ್ಫಿಂಗ್ ಪಟು ತನ್ವಿಜಗದೀಶ್ ಮೊದಲಾದವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು.