ಕಾಸರಗೋಡು, ಜು 12 (DaijiworldNews/HR): ಜಿಲ್ಲೆಯಲ್ಲಿ ಸುರಿದ ಮಳೆಗೆ ಜುಲೈ 8 ರಿಂದ 12 ರ ತನಕ 144 ಹೆಕ್ಟೇರ್ ಪ್ರದೇಶದ ಕೃಷಿ ಹಾನಿಗೊಂಡಿರುವುದಾಗಿ ಜಿಲ್ಲಾ ಕೃಷಿ ಅಧಿಕಾರಿ ಆರ್. ವೀಣಾ ರಾಣಿ ತಿಳಿಸಿದ್ದು, 398 ಕೃಷಿಕರಿಗೆ ಸುಮಾರು 49 . 19 ಲಕ್ಷ ರೂ. ಹಾನಿ ಉಂಟಾಗಿರುವುದಾಗಿ ಅಂಕಿ ಅಂಶತಿಳಿಸಿದೆ.
ಸಾಂದರ್ಭಿಕ ಚಿತ್ರ
ಕಾಞಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು 22.41 ಲಕ್ಷ ರೂ.ಗಳ ಬೆಳೆ ಹಾನಿಯಾಗಿದೆ. ಕಾರಡ್ಕ ಬ್ಲಾಕ್ ನಲ್ಲಿ 2.02 ಲಕ್ಷ ಹಾಗೂ ಕಾಸರಗೋಡು ಬ್ಲಾಕ್ ನಲ್ಲಿ 0.73 ಲಕ್ಷ ರೂ. ಮಂಜೇಶ್ವರ ಬ್ಲಾಕ್ ನಲ್ಲಿ ಅಂದಾಜು 19.40 ಲಕ್ಷ ರೂ. ನೀಲೇಶ್ವರಂ ಬ್ಲಾಕ್ ನಲ್ಲಿ 3.44 ಲಕ್ಷ, ಪರಪ್ಪ ಬ್ಲಾಕ್ ನಲ್ಲಿ 1.19 ಲಕ್ಷ. ಕಾಞಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯ 1.66 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕಾರಡ್ಕ ಬ್ಲಾಕ್ ನಲ್ಲಿ 50.02 ಹೆಕ್ಟೇರ್, ಕಾಸರಗೋಡು ಬ್ಲಾಕ್ ನಲ್ಲಿ 0.17 ಹೆಕ್ಟೇರ್ ಹಾಗೂ ಮಂಜೇಶ್ವರ ಬ್ಲಾಕ್ ನಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನೀಲೇಶ್ವರ ಬ್ಲಾಕ್ ಪಂಚಾಯಿತಿಯಲ್ಲಿ 12.47 ಹೆಕ್ಟೇರ್ ಮತ್ತು ಪರಪ್ಪ ಬ್ಲಾಕ್ ಪಂಚಾ ಯತ್ ವ್ಯಾಪ್ತಿಯಲ್ಲಿ 0.09 ಹೆಕ್ಟೇರ್ ಹಾನಿಯಾಗಿದೆ.
ಇನ್ನು ಕಾಞಂಗಾಡು ಬ್ಲಾಕ್ ಪಂಚಾಯತ್ ನ 87 ರೈತರು, ಕಾರಡ್ಕ ಬ್ಲಾಕ್ ನ 56 ರೈತರು, ಕಾಸರಕೋಟ ಬ್ಲಾಕ್ ನ 32 ರೈತರು, ಮಂಜೇಶ್ವರ ಬ್ಲಾಕ್ ನ 115 ರೈತರು, ನೀಲೇಶ್ವರ ಬ್ಲಾಕ್ ಪಂಚಾಯತ್ ನ 83 ರೈತರು, ಪರಪ್ಪ ಬ್ಲಾಕ್ ನ 25 ರೈತರು ಬೆಳೆ ಹಾನಿ ಗೆ ತುತ್ತಾಗಿದ್ದಾರೆ ಎಂದು ಅಂಕಿ ಅಂಶ ತಿಳಿಸಿದೆ.